ಮೇಲಂತಬೆಟ್ಟು: ಗ್ರಾಮ ಪಂಚಾಯತ್ ಮೇಲಂತಬೆಟ್ಟುವಿನಲ್ಲಿ 2021 – 22 ನೇ ಸಾಲಿನ ಜಮಾಬಂದಿ ಕಾರ್ಯಕ್ರಮವು ಸೆ.9ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ವಹಿಸಿದ್ದರು.
ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಕು| ಹರಿಣಾಕ್ಷಿ ವಹಿಸಿದ್ದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಮೇನೇಜರ್ ಪ್ರಶಾಂತ್ ಬಳಂಜ & ಪಂಚಾಯತ್ ಉಪಾಧ್ಯಕ್ಷರು , ಸರ್ವ ಸದಸ್ಯರು ಉಪಸ್ಥಿತರಿದ್ದರು.
ಜಮಾ ಖರ್ಚಿನ ವಿವರ ಕಾರ್ಯಧರ್ಶಿ ಯವರು ಮಂಡಿಸಿದ್ಧರು. ಪಂ. ಅಭಿವೃದ್ಧಿ ಅಧಿಕಾರಿ ಅಭಿನಯ ಆರ್ ಸ್ವಾಗತಿಸಿ, ಕಾರ್ಯದರ್ಶಿ ನಿರ್ಮಲ್ ಕುಮಾರ್ ಜಮಾಬಂದಿಯ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.