ನೆರಿಯ: ರೋಟರಿ ಸಮುದಾಯ ದಳ ವತಿಯಿಂದ ಶಿಕ್ಷಕ ಕೊರಗಪ್ಪ ಗೌಡ ಎನ್.ಕೆ ದಂಪತಿ ಅವರಿಗೆ ಗೌರವಾರ್ಪಣೆ

0

ನೆರಿಯ:  ಶಿಕ್ಷಕರ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸಮುದಾಯ ದಳ ನೆರಿಯ ಇದರ ವತಿಯಿಂದ ಶಿಕ್ಷಕ ಕೊರಗಪ್ಪ ಗೌಡ ಎನ್.ಕೆ, ವೇದಾವತಿ ದಂಪತಿ ಅವರನ್ನು ಗೌರವಿಸುವ ಕಾರ್ಯಕ್ರಮ ಸೆ.5ರಂದು ಅವರ ಮನೆಯಲ್ಲಿ ನಡೆಯಿತು.

ಕೊರಗಪ್ಪ ಗೌಡ ಎನ್.ಕೆ ಇವರು ಬುಳೇರಿ ಮೂಗ್ರು ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಆರಂಭಿಸಿ  ಗಂಡಿಬಾಗಿಲು ಶಾಲೆ , ಚಾರ್ಮಾಡಿ ಶಾಲೆ, ಪರ್ಲಾಣಿ ಶಾಲೆ, ತೋಟತ್ತಾಡಿ ಶಾಲೆಗಳಲ್ಲಿ ಸಹ ಶಿಕ್ಷಕರಾಗಿ, ಬಯಲು ಶಾಲೆ ಮತ್ತು ನೆರಿಯ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿರುತ್ತಾರೆ.

ಈ ಸಂದರ್ಭದಲ್ಲಿ   ಅಧ್ಯಕ್ಷೆ ಪುಪ್ಪ ಬಾಂದಡ್ಕ , ಕಾರ್ಯದರ್ಶಿ ನೀಲಯ್ಯ ಗೌಡ, ನಿಕಟ ಪೂರ್ವ ಅಧ್ಯಕ್ಷ ರಂಜನ್ ಕುಮಾರ್ ನೆರಿಯ , ಬಾಲಕೃಷ್ಣ ಗೌಡ ಮುಚ್ರಾಳಿ ಶಿಕ್ಷಕರ ಪುತ್ರಿ ಶ್ರೀ ರಕ್ಷಾ ಉಪಸ್ಧಿತರಿದ್ದರು.

LEAVE A REPLY

Please enter your comment!
Please enter your name here