



ಸುಲ್ಕೇರಿ: ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಮಿತಿ ಬ್ರಹ್ಮಗಿರಿಯ ತಿಂಗಳ ಮಾಸಿಕ ಸಭೆಯನ್ನು ಸಂಘದ ಅಧ್ಯಕ್ಷ ವಸಂತ ಪೂಜಾರಿಯವರ ನೇತೃತ್ವದಲ್ಲಿ ನಡೆಸಲಾಯಿತು.


ಸುಲ್ಕೇರಿ ಗ್ರಾಮದ ಸ್ವಜಾತಿ ಭಾಂದವರ ಆರೋಗ್ಯ ಮತ್ತು ಶಿಕ್ಷಣಕ್ಕೆ ಪೂರಕವಾಗಿ ಸಹಾಯಹಸ್ತವನ್ನು
ಸಮಿತಿಯಿಂದ ನೀಡುವಂತೆ, ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಉಪಾಧ್ಯಕ್ಷರಾದ ಶಂಕರ ಪೂಜಾರಿ,
ಹರೀಶ್ ಪೂಜಾರಿ, ಜೊತೆ ಕಾರ್ಯದರ್ಶಿ ಪ್ರಕಾಶ್ ಕೋಟ್ಯಾನ್,
ಕೋಶಾಧಿಕಾರಿ ಪ್ರಭಾಕರ ಪೂಜಾರಿ, ನಿರ್ದೇಶಕರಾದ
ಲಕ್ಷ್ಮಣ್ ಪೂಜಾರಿ, ಶ್ವೇತಾ ನಾರಾಯಣ ಪೂಜಾರಿ, ಗುರುರಾಜ ಪೂಜಾರಿ, ರಮೇಶ್ ಪೂಜಾರಿ, ಸಮಿತಿಯ ಸದಸ್ಯರಾದ
ಡೀಕಯ್ಯ ಪೂಜಾರಿ, ವಿಶ್ವನಾಥ ಪೂಜಾರಿ, ಅನ್ವಿತ್ ಪೂಜಾರಿ,
ಪ್ರೀತಿಶ್ ಪೂಜಾರಿ, ವಿಮಲ ಕೇಶವ ಪೂಜಾರಿ, ಶ್ಯಾಮಲ ವಸಂತ ಪೂಜಾರಿ ಉಪಸ್ಥಿತರಿದ್ದರು. ಪುಷ್ಪಾ ವಿಶ್ವನಾಥ ಪೂಜಾರಿ ನೆಕ್ಕಿನಡ್ಕ ಸ್ವಾಗತಿಸಿದರು.









