



ನಾರಾವಿ: ಗುರುವಾಯನಕೆರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನಾರಾವಿ ವಲಯದ ಮರೋಡಿ A ಕಾರ್ಯಕ್ಷೇತ್ರದ ಸದಸ್ಯ ಉಮೇಶ್ ಅವರ ತಂದೆ ಅಣ್ಣು ಅವರಿಗೆ ಔಟ್ ಸೈಡ್ ವೀಲ್ ಚೇರ್ ನ್ನು ದ.ಕ. ಜಿಲ್ಲೆ ಭಾರತೀಯ ಜನತಾ ಪಾರ್ಟಿಯ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಯಿತು.


ಒಕ್ಕೂಟದ ಅಧ್ಯಕ್ಷ ರಾಜು ಪೂಜಾರಿ, ವಲಯದ ಮೇಲ್ವಿಚಾರಕ ವಿಶಾಲ ಕೆ., ಒಕ್ಕೂಟದ ಮಾಜಿ ಅಧ್ಯಕ್ಷ ಸಂತೋಷ್ ಪೂಜಾರಿ, ಶೌರ್ಯ ವಿಪತ್ತು ಘಟಕದ ಸದಸ್ಯರು ಶೋಭಾ, ಒಕ್ಕೂಟದ ಮಾಜಿ ಪದಾಧಿಕಾರಿ ಸುದರ್ಶನ್, ಸೇವಾಪ್ರತಿನಿಧಿ ಶಶಿಕಲಾ ಹಾಗೂ ಅಣ್ಣು ಅವರ ಮಕ್ಕಳು ಮತ್ತು ಅಳಿಯ ಉಪಸ್ಥಿತರಿದ್ದರು.









