



ಬೆಳ್ತಂಗಡಿ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯ ಸಮಿತಿ ಹಾಗೂ ಕ್ಷೇತ್ರ ಸಮಿತಿ, ಪುತ್ತೂರು ಐ ಕೇರ್ ಸೆಂಟರ್ ಡಾ.ಅಶ್ವಿನ್ ಹಾಗೂ ಬೆಳ್ತಂಗಡಿ ವಿಕಾಸ್ ಒಪ್ಟಿಕಲ್ಸ್ ಅವರ ಸಹಯೋಗದಲ್ಲಿ ಡಿ.7ರಂದು ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣೆ ಜೇಸಿ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ರಾವ್ ದೀಪ ಬೆಳಗಿಸಿ ನೆರವೇರಿಸಿ ಶುಭವನ್ನು ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಸಮಿತಿ ಅಧ್ಯಕ್ಷ ರಾಜು ಪೂಜಾರಿ ಅಳದಂಗಡಿ ವಹಿಸಿದ್ದರು.



ಮುಖ್ಯ ಅತಿಥಿಗಳಾಗಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಮಹಮ್ಮದ್ ರಫೀಕ್, ಟೈಲರ್ಸ್ ಅಸೋಸಿಯೇಷನ್ ರಾಜ್ಯ ಸಮಿತಿ ಅಧ್ಯಕ್ಷ ಸುರೇಶ್ ಸಾಲಿಯಾನ್, ಜಿಲ್ಲಾ ಸಮಿತಿ ಅಧ್ಯಕ್ಷ ಜಯಂತ್ ಉರ್ಲಾಂಡಿ, ಜಿಲ್ಲಾ ಉಪಾಧ್ಯಕ್ಷೆ ವೇದಾವತಿ ಜನಾರ್ದನ, ಜಿಲ್ಲಾ ಕಾರ್ಯದರ್ಶಿ ಈಶ್ವರ್ ಕುಲಾಲ್, ಕ್ಷೇತ್ರ ಸಮಿತಿ ಕಾರ್ಯದರ್ಶಿ ಲ್ಯಾನ್ಸಿ ಡಿಸೋಜಾ, ಬೆಳ್ತಂಗಡಿ ವಲಯ ಸಮಿತಿ ಉಪಾಧ್ಯಕ್ಷ ಮೋಹನ್ ಶೆಟ್ಟಿ, ನಾಗೇಶ್ ಇಂಜಿನಿಯರ್ ಬೆಳ್ತಂಗಡಿ, ಅರುಣ್ ಶೆಟ್ಟಿ ಶ್ರೀ ದುರ್ಗಾ ಉದ್ಯಮಿಗಳು ಬೆಳ್ತಂಗಡಿ, ಬೆಳ್ತಂಗಡಿ ಸನ್ನಿಧಿ ಮೆಡಿಕಲ್ ನ ಮಾಲಕ ಸತ್ಯ ಶಂಕರ್ ಭಟ್, ಬೆಳ್ತಂಗಡಿ ವಲಯ ಸಮಿತಿ ಕಾರ್ಯದರ್ಶಿ ಜಿ.ವಿ.ಹರೀಶ್ ಸವನಾಲು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಶಾಲಪ್ಪ ಗೌಡ, ಜಿಲ್ಲಾ ಮಾಜಿ ಕಾರ್ಯದರ್ಶಿ ನವೀನ್ ಪೂಜಾರಿ, ವಲಯ ಸಮಿತಿ ಕೋಶಾಧಿಕಾರಿ ಸುರೇಖಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ನಿಧಿ ಮೆಡಿಕಲ್ಸ್ ಮಾಲಕ ಸತ್ಯಶಂಕರ್ ಭಟ್ ಕೊಡುಗೆಯಾಗಿ ನೀಡಿದ ವೀಲ್ ಚೆಯರನ್ನು ಧೀಕ್ಷಿತ್ ಬಿರ್ಮಜಲು ಅವರಿಗೆ ಹಸ್ತಾಂತರ ಮಾಡಲಾಯಿತು. ಟೈಲರ್ಸ್ ವೃತ್ತಿ ಭಾಂದವರಿಗೆ ಐಡಿ ಕಾರ್ಡ್ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಬೆಳ್ತಂಗಡಿ ವಲಯ ಸಮಿತಿಯ ಅಧ್ಯಕ್ಷ ಸುರೇಂದ್ರ ಕೋಟ್ಯಾನ್ ಸಂಘಟಿಸಿದ್ದರು. ಕ್ಷೇತ್ರ ಸಮಿತಿ ಮತ್ತು ವಲಯ ಸಮಿತಿಯ ಪದಾಧಿಕಾರಿಗಳು ಪೂರ್ಣ ಸಹಕಾರವನ್ನು ನೀಡಿದರು. ಕ್ಷೇತ್ರ ಸಮಿತಿ ಮಾಜಿ ಕಾರ್ಯದರ್ಶಿ ಸದಾನಂದ ಸಾಲಿಯಾನ್ ಬಳಂಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಸಂತ ಸ್ವಾತಿ ಟೈಲರ್ ಧನ್ಯವಾದ ಸಲ್ಲಿಸಿದರು.








