ಬದ್ಯಾರ್: ಫಾ. ಎಲ್.ಎಂ. ಪಿಂಟೊ ಆಸ್ಪತ್ರೆಯ ಹೊಸ ತುರ್ತು ಚಿಕಿತ್ಸಾ ಘಟಕ ಲೋಕಾರ್ಪಣೆ

0

ಬದ್ಯಾರ್: ಫಾ. ಎಲ್ ಎಂ ಪಿಂಟೊ ಆಸ್ಪತ್ರೆಯಲ್ಲಿ ಹೊಸ ಎಮರ್ಜೆನ್ಸಿ ಚಿಕಿತ್ಸಾ ವಿಭಾಗ, ನವೀಕೃತ ನೊಂದಾವಣೆ ಹಾಗೂ ಬಿಲ್ಲಿಂಗ್ ವಿಭಾಗ, ಅತ್ಯಾಧುನಿಕ ಹೊಸ ಸ್ಕ್ಯಾನಿಂಗ್ ಮೆಶಿನ್,
ಎಕ್ಸ್‌ರೆ ಹಾಗೂ ಹೊಸ ಸೌಲಭ್ಯಗಳು ಹೊಸ ತುರ್ತು ಚಿಕಿತ್ಸಾ ವಾರ್ಡ್‌ನ ಆಶೀರ್ವಚನ ಮತ್ತು ಲೋಕಾರ್ಪಣೆ ಡಿ. 1ರಂದು ನಡೆಯಿತು.

ಅನಿವಾಸಿ ಭಾರತೀಯ ಮಂಗಳೂರು ಮತ್ತು ದುಬೈ ಉದ್ಯಮಿ ಫ್ಲೇವಿಯಾ ಡಿ’ಸೋಜಾ ಮತ್ತು ಮೈಕೆಲ್ ಡಿ’ಸೋಜಾ ಅವರು ಲೋಕಾರ್ಪಣೆ ಮಾಡಿದರು. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನಾ ಆಶೀರ್ವಚನ ಮಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಮಂಗಳೂರು ಫಾದರ್ ಮುಲ್ಲರ್ ದತ್ತಿ ಸಂಸ್ಥೆಗಳ ನಿರ್ದೇಶಕ ರೆ. ಫಾ. ಫೌಸ್ಟಿನಾ ಲೋಬೊ, ಬೆಳ್ತಂಗಡಿ ಡೀನರಿ ರೆ. ಫಾ. ವಾಲ್ಟರ್ ಡಿ’ಮೆಲ್ಲೊ ಡೀನ್, ಮಂಗಳೂರು ಡಯಾಸಿಸ್ ಎಸ್ಟೇಟ್ ಮ್ಯಾನೇಜರ್
ರೆ. ಫಾ. ಮ್ಯಾಕ್ಸಿಮ್ ರೊಸಾರಿಯೊ, ಮಂಗಳೂರು CODP ಕಾರ್ಯದರ್ಶಿ ರೆ. ಫಾ. ವಿನ್ಸೆಂಟ್ ಡಿ’ಸೋಜಾ, ಪ್ರಾಂತೀಯ ಸುಪೀರಿಯರ್ ಸೀನಿಯರ್ ಸಿ | ಲಿಲ್ಲಿ ಪಿರೇರಾ, ಮಂಗಳೂರು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಡೀನ್ ಡಾ. ಆಂಟನಿ ಸಿಲ್ವನ್, ಬದ್ಯಾರ್ ಸಂತ ರಫೇಲ್ ಚರ್ಚ್ ನ ಪಾಲನ ಮಂಡಳಿ ಉಪಾಧ್ಯಕ್ಷೆ ಪ್ರೇಮಲತಾ ಫ್ರಾಂಕ್, ಟಿ.ಎಚ್.ಓ ಡಾ. ಸಂಜತ್ ಬೆಳ್ತಂಗಡಿ ಗೌರವ ಅತಿಥಿಗಳಾಗಿ ಭಾಗವಹಿಸಿದರು.

ಬೆಳ್ತಂಗಡಿ ICYM ನಿರ್ದೇಶಕ ಫಾ| ಲ್ಯಾರಿ ಪಿಂಟೋ, ಬೆಳ್ತಂಗಡಿ ಉದ್ಯಮಿ ವಿಜಯ್ ಸಿಕ್ವೇರಾ, ಪಡಂಗಡಿ ಗ್ರಾಮ ಪಂಚಾಯತ್ ಪಿಡಿಒ ಶಫನ, ಬಳಂಜ ಗ್ರಾಮ ಪಂಚಾಯತ್ ಪಿಡಿಒ ಶಶಿಕಲಾ ಎಮ್., ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಪೂಜಾರಿ, ಪಡಂಗಡಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಜೈನ್, ಬಳಂಜ ಗ್ರಾ.ಪಂ. ಅಧ್ಯಕ್ಷೆ ಶೋಭಾ, ಗೋಳಿಯಂಗಡಿ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಪೂಜಾರಿ, ನೈನಾಡು ಶ್ರೀರಾಮ ಭಜನಾ ಮಂಡಳಿ ಗೌರವ ಅಧ್ಯಕ್ಷ ಜಾರಪ್ಪ ಪೂಜಾರಿ, ಬದ್ಯಾರ್ ಫ್ರೆಂಡ್ಸ್ ಅಧ್ಯಕ್ಷ ಕೆವಿನ್ ಡಿಸೋಜ, ಕನ್ನಡಿಕಟ್ಟೆ ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಆಡಳಿತಾಧಿಕಾರಿ ಫಾದರ್ ರೋಷನ್ ಕ್ರಾಸ್ತಾ ಸ್ವಾಗತಿಸಿದರು. ಬದ್ಯಾರ್ ಫಾದರ್ ಎಲ್.ಎಂ ಪಿಂಟೊ ಆಸ್ಪತ್ರೆ ಟ್ರಸ್ಟಿಗಳು ಮತ್ತು ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here