



ಬೆಳ್ತಂಗಡಿ: ಶಾಲಾ ಶಿಕ್ಷಕಿಯರ ಪ್ರಾರ್ಥನೆಯ ಬಳಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕ ನಸೀರ್ ಅಹಮದ್ ಖಾನ್ ಅವರು ಹಸಿರು ನಿಶಾನೆಯ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅತಿಥಿಗಳ ಜೊತೆಗೂಡಿ ನೆಹರೂರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಮುಖ್ಯೋಪಾಧ್ಯಾಯ ಪ್ರಭಾಕರ ಶೆಟ್ಟಿ ಅವರು ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಶಿಕ್ಷಕಿ ಶ್ರುತಿ ನೆಹರೂರವರ ಆದರ್ಶ ಜೀವನದ ಕುರಿತು ಮಾತನಾಡಿದರು. ತದನಂತರ ನಡೆದ ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಬಿಂದು ಕೇಶವರವರು ಬಹುಮಾನ ನೀಡುವ ಮೂಲಕ ಚಾಲನೆ ನೀಡಿದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶುಕುರ್ ಸಾಹೇಬ್, ಉಪಾಧ್ಯಕ್ಷ ಧನ ಕೀರ್ತಿ ಜೈನ್ ಹಾಗೂ ವಿನಯ, ಮಾಜಿ ಉಪಾಧ್ಯಕ್ಷ ವೀರೇಂದ್ರ ಕುಮಾರ್ ಜೈನ್, ಹರಿಣಾಕ್ಷಿ, ಸದಸ್ಯ ಯಶೋಧರ ಅವರು ಉಪಸ್ಥಿತರಿದ್ದು, ಮಕ್ಕಳಿಗೆ ಬಹುಮಾನ ವಿತರಿಸಿದರು. ಶಿಕ್ಷಕಿಯರಾದ ಸೌಜನ್ಯ, ಅಫ್ರ, ರೂಪ ಅವರು ವಿಜೇತರ ಹೆಸರನ್ನು ವಾಚಿಸಿದರು. ಶಿಕ್ಷಕಿ ಕುಮುದಾಕ್ಷಿ ಅವರ ಸ್ವಾಗತಿಸಿದರು. ಶಿಕ್ಷಕಿ ಪೈಝುನ್ ರವರು ನಿರ್ವಹಿಸಿದರು. ತದನಂತರ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ಜರಗಿತು. ರಕ್ಷಿತಾ ಧನ್ಯವಾದವಿತ್ತರು.









