



ಉಜಿರೆ: ಮಂಗಳೂರಿನ ಮಾರುತಿ ಕಂಪನಿಯ ಭಾರತ್ ಆಟೋ ಕಾರ್ಸ್ ಖಾಸಗಿ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂತೋಷ್ (55ವ) ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.17ರಂದು ನಡೆದಿದೆ.

ಹುಬ್ಬಳ್ಳಿ ಮೂಲದ ಇವರು ಹಲವು ವರ್ಷಗಳಿಂದ ಭಾರತ್ ಆಟೋ ಕಾರ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ನಂತರ ಮಂಗಳೂರಿನ ಅದೇ ಸಂಸ್ಥೆಯಲ್ಲಿ ಇದ್ದು ಉಜಿರೆಯ ಚಾರ್ಮಾಡಿ ರಸ್ತೆಯ ಖಾಸಗಿ ರೂಂ ನಲ್ಲಿ ವಾಸವಿದ್ದರು. ಮೃತರು ಪತ್ನಿ ಭಾರತಿ, ಮಗ ಸಂಕೇತ್ ಹಾಗೂ ಮಗಳನ್ನು ಅಗಲಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.









