


ಮುಂಡಾಜೆ: ಗ್ರಾಮದ ಕುಂಟಾಲ್ ಪಲ್ಕೆ ಅಂಗನವಾಡಿಯಲ್ಲಿ ನ. 14ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಪಂಚಾಯತ್ ನ ಸದಸ್ಯ ರಾಮಣ್ಣ ಶೆಟ್ಟಿ ಅಗರಿ ಅವರು ನೆರವೇರಿಸಿದರು. ಶಾಲಿನಿ ಅವರು ಮಕ್ಕಳಿಗೆ ಮಕ್ಕಳ ದಿನಾಚರಣೆ ಶುಭ ಹಾರೈಸಿದರು. ಶ್ರೀ ಬಾಲ ವಿಕಾಸ ಕೇಂದ್ರದ ನೂತನ ಅಧ್ಯಕ್ಷೆ ಮೀನಾ ಉಪಸ್ಥಿತರಿದ್ದರು.


ಮಕ್ಕಳ ಪೋಷಕರ ಮತ್ತು ಮಕ್ಕಳ ಅನೇಕ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದರು. ಅಂಗನವಾಡಿ ಕಾರ್ಯಕರ್ತೆ ಗಿರಿಜಾ ಅವರು ಎಲ್ಲರನ್ನು ಸ್ವಾಗತಿಸಿದರು. ಸಹಾಯಕಿ ವಸಂತಿ ಎಲ್ಲರಿಗೂ ಧನ್ಯವಾದ ನೀಡಿದರು.









