ವರ್ತಕರ ಸಂಘದಿಂದ ನೂತನ ಡಿ.ವೈ.ಎಸ್.ಪಿ ಸಿ.ಕೆ. ರೋಹಿಣಿ ಅವರಿಗೆ ಅಭಿನಂದನೆ

0

ಬೆಳ್ತಂಗಡಿ: ಪೊಲೀಸ್ ಉಪವಿಭಾಗಕ್ಕೆ ಪ್ರಥಮ ಡಿ.ವೈ.ಎಸ್.ಪಿ ಆಗಿ ಅಧಿಕಾರ ಸ್ವೀಕರಿಸಿದ ಡಿ.ವೈ.ಎಸ್.ಪಿ ರೋಹಿಣಿ ಸಿ.ಕೆ.ಅವರಿಗೆ ವರ್ತಕರ ಸಂಘದಿಂದ ಕಛೇರಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಸುರಕ್ಷತೆಗೆ ಸಂಬಂಧಪಟ್ಟ ವಿಚಾರಗಳನ್ನು ಹಾಗೂ ಬೆಳ್ತಂಗಡಿ ಪಟ್ಟಣದ ಕೆಲವು ಜುಂಕ್ಷನ್ ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಬಗ್ಗೆ ಅವರ ಗಮನಕ್ಕೆ ತರಲಾಯಿತು.

ಡಿ.ವೈ.ಎಸ್ಪಿ ಅವರು ಕಾನೂನು ಹಾಗೂ ಸುರಕ್ಷಾ ದೃಷ್ಟಿಯಲ್ಲಿ ತಮ್ಮ ಕರ್ತವ್ಯದಲ್ಲಿ ಉತ್ತಮವಾದ ಕೆಲಸ ಮಾಡುವ ಉದ್ದೇಶದಿಂದ ನಿಮ್ಮ ತಾಲೂಕಿಗೆ ಬಂದಿದ್ದೇನೆ. ನೀವೆಲ್ಲರೂ ಬಂದು ನನಗೆ ಭೇಟಿಯಾಗಿ ಶುಭ ಹಾರೈಸುವಾಗ ತುಂಬಾ ಸಂತೋಷವಾಗುತ್ತದೆ. ಹಾಗೂ ನಿಮ್ಮೆಲ್ಲರ ಸಹಕಾರ ಕೋರುತ್ತಿದ್ದೇನೆ ಎಂದು ಹೇಳಿದರು.

ವರ್ತಕರ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೊ, ಉಪಾಧ್ಯಕ್ಷ ಶಶಿಧರ್ ಪೈ, ಜತೆ ಕಾರ್ಯದರ್ಶಿ ಯಶವಂತ್ ಪಟವರ್ದನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ಶೀತಲ್ ಜೈನ್, ಶರ್ಮಿಳಾ ಮೋರಸ್, ಶಾoಭವಿ ಬಂಗೇರ, ವಿಲ್ಸನ್ ಗೊನ್ಸಲ್ವಿಸ್, ವಿನ್ಸಂಟ್ ಡಿಸೋಜಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here