ಅರಸಿನಮಕ್ಕಿ: ನವಶಕ್ತಿ ಆಟೋ ಚಾಲಕ ಮಾಲಕ ಸಂಘದಿಂದ ಹಾಗೂ ಊರವರಿಂದ ಶ್ರಮದಾನ

0

ಅರಸಿನಮಕ್ಕಿ: ನವಶಕ್ತಿ ಆಟೋ ಚಾಲಕ ಮಾಲಕ ಸಂಘದ ಸದಸ್ಯರು ಮತ್ತು ಊರಿನವರು ಅರಸಿನಮಕ್ಕಿಯಿಂದ ಬೂಡುಮುಗೇರು ಹೋಗುವ ರಸ್ತೆಯನ್ನು ಸರಿಪಡಿಸುವ ಮೂಲಕ ಶ್ರಮದಾನ ನಡೆಸಿದರು. ಈ ರಸ್ತೆಯು ಸಂಪೂರ್ಣ ಹಾಳಾಗಿದ್ದು ವಿಪರೀತ ಮಳೆಯ ಕಾರಣ ರಸ್ತೆ ಮದ್ಯದಲ್ಲಿ ಮತ್ತು ಅಕ್ಕ ಪಕ್ಕದಲ್ಲಿ ದೊಡ್ಡ ದೊಡ್ಡ ಗುಂಡಿಗಳು ಮತ್ತು ರಸ್ತೆ ಅಕ್ಕ ಪಕ್ಕ ಏರಿಳಿತ ನಿರ್ಮಾಣವಾಗಿದ್ದು ಜೆಸಿಬಿ ಮೂಲಕ ಮಣ್ಣು ಹಾಕಿ ಗುಂಡಿಗಳನ್ನು ಮುಚ್ಚಿದರು.

ಜೆಸಿಬಿಯ ಸಂಪೂರ್ಣ ಮೊತ್ತವನ್ನು ನವಶಕ್ತಿ ಆಟೋ ಚಾಲಕ ಮಾಲಕ ಸಂಘದವರು ಹಾಗೂ ಸ್ಥಳೀಯ ದಾನಿಗಳು ಭರಿಸಿದ್ದು ಈ ರಸ್ತೆಯು ವಾಹನ ಓಡಾಟಕ್ಕೆ ಯೋಗ್ಯ ಎಂಬ ರೀತಿಯಲ್ಲಿ ಶ್ರಮದಾನದ ಮೂಲಕ ಸರಿಪಡಿಸಿದ್ದಾರೆ.

LEAVE A REPLY

Please enter your comment!
Please enter your name here