


ಉಜಿರೆ: ಮಂಗಳೂರು ಸ್ಕೌಟ್ ಗೈಡ್ ಭವನ ಪಿಲಿಕುಳದಲ್ಲಿ ನಡೆದ ಜಿಲ್ಲಾ ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ಅನುಗ್ರಹ ಶಾಲೆ ಉಜಿರೆಯ ಗೈಡ್ ವಿಭಾಗ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.


ವಿಜೇತ ವಿದ್ಯಾರ್ಥಿನಿಯರಾದ ಅನನ್ಯ, ನಿಶಾನ್ಯ, ಜವಿಟಾ, ಸ್ನೇಹಲ್, ರಿಶಲ್, ಕ್ಲೇರಿಸ್ಸಾ, ಚರಿಷ್ಮಾ, ಅನ್ವಿತ ಅವರನ್ನು ಶಾಲಾ ಸಂಚಾಲಕರು, ಪ್ರಾಂಶುಪಾಲರು, ಶಿಕ್ಷಕರು ಶಾಲಾಭಿವೃದ್ಧಿ ಮಂಡಳಿಯವರು ಅಭಿನಂದಿಸಿದ್ದಾರೆ.









