


ಗುರುವಾಯನಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ .ಟ್ರಸ್ಟ್, ನಾರಾವಿ ವಲಯದ ನಾರಾವಿ ಎ ಮತ್ತು ಬಿ ಕಾರ್ಯಕ್ಷೇತ್ರದ ಒಕ್ಕೂಟಗಳ ತ್ರೈಮಾಸಿಕ ಸಭೆಯಲ್ಲಿ ನಾರಾವಿ ವಲಯದ 151 ಹೊಸ ಸದಸ್ಯರ ಸೇರ್ಪಡೆ ಮತ್ತು ಜನಮಂಗಲ ಕಾರ್ಯಕ್ರಮಗಳ ಉದ್ಘಾಟನೆಯನ್ನು ನಾರಾವಿ ಜಿನಬಸದಿಯ ಆಡಳಿತ ಮೊಕ್ತೇಸರ ನಿರಂಜನ್ ಅಜ್ರಿ ಮಾಡಿದರು.


ಈ ಕಾರ್ಯಕ್ರಮದಲ್ಲಿ ವಿಶೇಷ ಚೇತನರಾದ ಶಿವಣ್ಣ ದೇವಾಡಿಗ ಅವರಿಗೆ ಕೊಮೊಡೊ ವ್ಹೀಲ್ ಚೇರ್ ವಿತರಣೆ. ಹಾಗೂ 66 ವರ್ಷ ಮೇಲ್ಪಟ್ಟ ಒಕ್ಕೂಟಗಳ ಸಂಘದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಸಂಘಕ್ಕೆ ಹೊಸಸೇರ್ಪಡೆ ಆದ ಹೊಸ ಸದಸ್ಯರನ್ನು ಒಕ್ಕೂಟಕ್ಕೆ ಸ್ವಾಗತಿಸಲಾಯಿತು. ಗಂಭೀರ ಆರೋಗ್ಯ ಸಮಸ್ಯೆಯಲ್ಲಿದ್ದ ಕುತ್ಲೂರು ಧರ್ಣಪ್ಪ ಪೂಜಾರಿ ಅವರಿಗೆ 30000 ಕ್ರಿಟಿಕಲ್ ಫಂಡ್ ವಿತರಣೆ ಮಾಡಲಾಯಿತು.
ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ, ವಲಯ ಸಂಚಾಲಕ ವಸಂತ್ ಭಟ್, ಮುಖ್ಯ ಅತಿಥಿಗಳಾಗಿ SKDRDP ರುಡ್ ಸೆಟ್ ಸಂಸ್ಥೆಯ ಕರುಣಾಕರ ಜೈನ್ ಅವರು ಯೋಜನೆಯ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವೇಣೂರು ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮೋಹನ್ ಕುಮಾರ್, ರಾಕೇಶ್, ತಾಲೂಕು ಜನಜಾಗೃತಿ ಸದಸ್ಯ ವಸಂತ್ ಗುಣನಿಲ, ವಲಯದ ವಲಯಾಧ್ಯಕ್ಷ ಶೇಖರ್ ಹೆಗ್ಡೆ, ತಾಲೂಕು ಯೋಜನಾಧಿಕಾರಿ ಅಶೋಕ್ ಬಿ. ಅವರು ಯೋಜನೆಯು ನಡೆದು ಬಂದ ದಾರಿ ಯನ್ನು ವಿಸ್ತಾರವಾಗಿ ತಿಳಿ ಹೇಳಿದರು. ಗ್ರಾಮ ಸಮಿತಿ ಅಧ್ಯಕ್ಷ ಜಗದೀಶ್ ಹೆಗ್ಡೆ, ನಾರಾವಿ ಬಿ ಒಕ್ಕೂಟದ ಅಧ್ಯಕ್ಷ ಪ್ರವೀಣ್, ಮರೋಡಿ ಬಿ ಒಕ್ಕೂಟದ ಅಧ್ಯಕ್ಷ ರಾಜು ಪೂಜಾರಿ, ನಾರಾವಿ VLE ಅನಿಷಾ, ಮತ್ತು ನಾರಾವಿ ಎ ಮತ್ತು ಬಿ ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ಎಲ್ಲಾ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.
ನಾರಾವಿ ಸೇವಾ ಪ್ರತಿನಿಧಿ ಹರಿಣಾಕ್ಷಿ ಸ್ವಾಗತಿಸಿ, ನಾರಾವಿ ವಲಯ ಮೇಲ್ವಿಚಾರಕಿ ವಿಶಾಲ ಕೆ. ಕಾರ್ಯಕ್ರಮ ನಿರೂಪಣೆ ಮಾಡಿದರು. ಸೇವಾ ಪ್ರತಿನಿಧಿ ರೇಷ್ಮಾ ಜೈನ್ ಅವರು ವಂದನಾರ್ಪಣೆ ಸಲ್ಲಿಸಿದರು.









