


ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಗೈಡ್ಸ್, ಕಬ್ಸ್ ಮತ್ತು ಬುಲ್ ಬುಲ್ಸ್ ಹಾಗೂ ಬನ್ನಿಸ್ ವತಿಯಿಂದ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು. ಮೊದಲು ಧ್ವಜ ವಂದನೆಯನ್ನು ಮಾಡಿ ಬಳಿಕ ಧರ್ಮಸ್ಥಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಅವರು ಅಂಚೆ ಮುದ್ರೆಯನ್ನು ಪ್ರಚುರಣೆಗೊಳಿಸಿದರು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅವರು ಮಾತನಾಡುತ್ತಾ ಸ್ಕೌಟ್ ಮತ್ತು ಗೈಡಿನ ಉದ್ದೇಶ ಅದರಲ್ಲಿರುವ ಶಿಸ್ತು ವಿದ್ಯಾರ್ಥಿಗಳಿಗೆ ಅದರ ಅಗತ್ಯತೆ, ಸಮಾಜ ಸೇವೆಯ ಅಗತ್ಯತೆ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಮಾರ್ಮಿಕವಾಗಿ ವಿವರಿಸಿದರು. ಬಳಿಕ ಬನ್ನಿ ವಿದ್ಯಾರ್ಥಿಗಳಿಗೆ ಆಪ್ರೋನ್ ತೊಡಿಸಿ ಸಾಂಕೇತಿಕವಾಗಿ ಸ್ವಾಗತಿಸಲಾಯಿತು. ಈ ದಿನದ ವಿಶೇಷವನ್ನು ಕಬ್ ಮಾಸ್ಟರ್ ಕಾದಂಬರಿ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ಹಾಗೂ ಕಬ್ಸ್ ಬುಲ್ ಬುಲ್ಸ್ ವಿದ್ಯಾರ್ಥಿಗಳ ಪ್ರವೇಶ ಸಮಾರಂಭ ಸಹ ಏರ್ಪಡಿಸಲಾಗಿತ್ತು. ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ. ಅವರ ಸಹಕಾರದೊಂದಿಗೆ ಮೂಡಿಬಂದ ಈ ಕಾರ್ಯಕ್ರಮವನ್ನು ಗೈಡ್ಸ್ ನ ಆರುಷ್ ಪಿ. ಜೋಷಿ ಸ್ವಾಗತಿಸಿದರು. ಗೈಡ್ಸ್ ನ ವಿಧ್ಯಾರ್ಥಿನಿ ಆದ್ಯ ರೈ ನಿರ್ವಹಿಸಿದರು. ಬುಲ್ ಬುಲ್ ನಾ ರಕ್ಷಾ ಅತಿಥಿಗಳ ಕಿರುಪರಿಚಯವನ್ನು ನೀಡಿ, ಕಬ್ ವಿಧ್ಯಾರ್ಥಿ ಗೌತಮ್ ಎಮ್. ಧನ್ಯವಾದವಿತ್ತರು.








