


ಶಿಬಾಜೆ: ನೂತನವಾಗಿ ಮೆಸ್ಕಾಂನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮಾಜಿ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ನ ಹಿರಿಯ ಮುಖಂಡ ಹರೀಶ್ ಕುಮಾರ್ ಅವರನ್ನು ಶಿಬಾಜೆ ಗ್ರಾಮದ ಕಾಂಗ್ರೆಸ್ ಮುಖಂಡರು ಬೆಳ್ತಂಗಡಿಯ ಖಾಸಗಿ ಕಚೇರಿಯಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.


ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಮೇಲ್ಛಾವಣಿ ಕಾಮಗಾರಿಗೆ ನಡೆಯುತ್ತಿದ್ದೂ ಸಹಕಾರ ನೀಡುವಂತೆ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ್ ರಾವ್ ಮನವಿ ಮಾಡಿಕೊಂಡರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಸಿ. ಮ್ಯಾತ್ಯು, ಪೆರ್ಲ ಬೂತ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಸಂತ ಗೌಡ, ಸದಸ್ಯರಾದ ಸುಂದರ ಎಂ.ಕೆ., ಜೋನ್ ಬೂಡುದಮಕ್ಕಿ ಉಪಸ್ಥಿತರಿದ್ದು, ಬಟ್ಟಾಜೆ ಟಿಸಿ ಯಿಂದ ಅಜಿರಡ್ಕ, ಗುಂಡ್ಯ ಪತ್ತಿಮಾರು ಭಾಗಕ್ಕೆ ವಿದ್ಯುತ್ ಸಂಪರ್ಕ ಇದ್ದು, ಬೇಸಿಗೆಯಲ್ಲಿ ಈ ಭಾಗದ ಕೃಷಿಕರು ಲೋ ವೋಲ್ಟೇಜ್ ಸಮಸ್ಯೆ ಎದುರಿಸುತ್ತಿದ್ದಾರೆ.
ಅಜಿರಡ್ಕ ಭಾಗದಲ್ಲಿ ಟಿಸಿ ನಿರ್ಮಿಸುವಂತೆ ಹಾಗೂ ಗ್ರಾಮದ ಪೆರ್ಲದಿಂದ ಶಿಬಾಜೆ, ಆರಂಪಾದೆ ಸಂಪರ್ಕಿಸುವ ವಿದ್ಯುತ್ ತಂತಿ ಮತ್ತು ಕಂಬಗಳು ಬಹಳಷ್ಟು ಹಳೆಯದಾಗಿದ್ದು ನೂತನ ವಯರ್ ಅಳವಡಿಸಿ ಈ ಭಾಗದ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸುವಂತೆ ಮನವಿ ಮಾಡಿದರು. ಅದಲ್ಲದೆ ಶಿಬಾಜೆ, ಶಿಶಿಲ, ಅರಸಿನಮಕ್ಕಿ, ರೆಖ್ಯ ಭಾಗದಲ್ಲಿ ಬೇಸಿಗೆಯಲ್ಲಿ ಬಹಳಷ್ಟು ವಿದ್ಯುತ್ ಸಮಸ್ಯೆ ಉಂಟಾಗುವುದರಿಂದ ಪಂಪ್ ಸೆಟ್ ಗಳು ಹೊತ್ತಿ ಉರಿದು ಹಾಳಾಗುತ್ತಿದೆ ಇದಕ್ಕಾಗಿ ಅರಸಿನಮಕ್ಕಿ ಗೆ ಮಂಜೂರು ಆಗಿರುವ ಸಬ್ಸ್ಟೇಷನ್ ಕೆಲಸವನ್ನು ಶೀಘ್ರ ಪ್ರಾರಂಭಿಸುವಂತೆ ಮನವಿ ನೀಡಿದರು. ಮನವಿಗಳನ್ನು ಸ್ವೀಕರಿಸಿದ ಮೆಸ್ಕಾಂ ಅಧ್ಯಕ್ಷರು ಆದಷ್ಟು ಕ್ಲಪ್ತ ಸಮಯದಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಡುವ ಭರವಸೆ ನೀಡಿರುವುದಾಗಿ ಶ್ರೀಧರ್ ರಾವ್ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.









