ಮರಳಿನ ಅಭಾವದ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಿ: ಅನುಜ್ ಜೈರಾಜ್ ಸಾಲಿಯಾನ್ ಕಾನರ್ಪ

0

ಬೆಳ್ತಂಗಡಿ: ಮರಳು ಮತ್ತು ಕೆಂಪು ಕಲ್ಲಿನ ಅಭಾವದ ಬಗ್ಗೆ ಕಾರ್ಮಿಕ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆಯನ್ನು ಮಾಡಿವೆ. ನಮ್ಮ ಸಂಘಟನೆಯೂ ದೊಡ್ಡಮಟ್ಟದಲ್ಲಿ ಈ ಕುರಿತು ಪ್ರತಿಭಟಿಸಿದೆ ಆದರೆ ಇನ್ನೂ ಕೂಡ ಮರಳಿನ ಬಗ್ಗೆ ಸರಿಯಾದ ಕ್ರಮ ಆಗಿರುವುದಿಲ್ಲ.

2019ರಲ್ಲಿ ಪ್ರತಿ ಪಂಚಾಯತಿಗಳಲ್ಲಿ ಸ್ಥಳೀಯ ಮನೆ ನಿರ್ಮಾಣ ಮಾಡುವವರಿಗೆ ಆಯಾ ಪಂಚಾಯತ್ ವ್ಯಾಪ್ತಿಯಲ್ಲಿ ಮರಳು ಪರ್ಮಿಟ್ ಸರಳವಾಗಿ ಸಿಗುವಂತೆ ಸರಕಾರ ಆದೇಶವನ್ನು ಜಾರಿಗೊಳಿಸಿದೆ ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಜಾರಿಯಾಗಿಲ್ಲ. ಪಕ್ಕದ ಜಿಲ್ಲೆಗಳಲ್ಲಿ ಅದು ಜಾರಿಯಾಗಿ ಅಲ್ಲಿಯ ಮನೆ ಕಟ್ಟುವವರಿಗೆ ಬಹಳ ಪ್ರಯೋಜನ ಆಗಿದೆ. ಆದರೆ ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರಮ ಆಗಿಲ್ಲ. ನಾನು ಕೆಲವೊಂದು ಮಾಹಿತಿಗಳ ಮೂಲದಿಂದ ತಿಳಿದುಕೊಂಡಾಗ ಈಗಲೂ ನಾನ್. ಸಿ. ಆರ್. ಜೆಡ್ ಸ್ಥಳಗಳಲ್ಲಿ ಅಂದರೆ ಮಂಗಳೂರು ಹೊರತಾದ ತಾಲೂಕುಗಳಲ್ಲಿ 20 ರಿಂದ 25 ಸಾವಿರದವರೆಗೆ ಹೊಯ್ಗೆಗೆ ಹಣ ಪಡೆದುಕೊಳ್ಳುತ್ತಿದ್ದಾರೆ. ಆದರೆ ಪಂಚಾಯಿತಿನಲ್ಲಿ ರೂ.300 ಪಾವತಿಸಿ ಅವರ ಪ್ರದೇಶಗಳಲ್ಲಿ ಮರಳು ತೆಗೆಯಲು ಬೇಕಾದಷ್ಟು ಅವಕಾಶಗಳಿದ್ದರೂ, ಅದನ್ನು ಸಮರ್ಥವಾಗಿ ಉಪಯೋಗಿಸದೆ ಇನ್ನೂ ಇದರ ಬಗ್ಗೆ ಜಾಣ ಮೌನ ವಹಿಸಿರುವುದು ಯಾರ ವಿರುದ್ಧ ಯಾಕೆ ಪ್ರತಿಟಿಸಬೇಕು ಅಥವಾ ನೇಪಾಳದ ನೀತಿ ಬಡವನನ್ನು ಬದುಕಲು ಬಿಡದೆ ಕಾನೂನು ಎಂಬ ಗುಮ್ಮವನ್ನು ತೋರಿಸಿ ಬಡವನ ಜೀವನವನ್ನು ನರಕ ಮಾಡುವಂತಹ ಆಡಳಿತ ವ್ಯವಸ್ಥೆ ಬೇಕಾ ಎನ್ನುವುದು ಈಗಿನ ಪ್ರಶ್ನೆ.

ದಯವಿಟ್ಟು ಇದು ಯಾರ ವಿರುದ್ಧ ಅಲ್ಲ, ಕಾರ್ಮಿಕನ ಪರ ಮತ್ತು ಮನೆ ಕಟ್ಟುವವರಿಗೆ ಇದರಿಂದ ಪ್ರಯೋಜನ ಆಗಲಿ ಎನ್ನುವ ಸದುದ್ದೇಶದಿಂದ ನನ್ನ ಅಭಿಪ್ರಾಯವನ್ನು ಸಲ್ಲಿಸಿರುತ್ತೇನೆ ಎಂದು ಬಿ.ಎಂ.ಎಸ್. ರಾಜ್ಯ ಕಾರ್ಯದರ್ಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here