


ವೇಣೂರು: ದಾವಣಗೆರೆ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಹಾಗೂ ಕರ್ನಾಟಕ ರಾಜ್ಯ ದೈ. ಶಿ. ಶಿ. ಸಂಘ, ದಾವಣಗೆರೆ ಹಾಗೂ ಅಲ್ – ಫತಹ್ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ದಾವಣಗೆರೆ ಸುಲ್ತಾನ್ ಪ್ಯಾಲೇಸ್ ನೇತೃತ್ವದಲ್ಲಿ ನಡೆದ 2025-26ನೇ ಸಾಲಿನ, 14 ವರ್ಷದ 60+ ವಿಭಾಗದಲಿ ಬಾಲಕ -ಬಾಲಕಿಯರ ರಾಜ್ಯ ಮಟ್ಟದ ಶಾಲಾ ವಲಯದ ಕರಾಟೆ ಸ್ಪರ್ಧೆಯಲ್ಲಿ ನವಚೇತನ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಶರ್ವಿನ್ ಮೊನಿಸ್ ಅವರು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ, ಪ್ರಥಮ ಸ್ಥಾನವನ್ನು ಪಡೆದು, ಮಧ್ಯ ಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.


ವಿಜೇತ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯಿನಿ, ಶಿಕ್ಷಕ ಶಿಕ್ಷಕೇತರ ವೃಂದ, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.









