


ಬೆಳ್ತಂಗಡಿ: ಯುವ ಉದ್ಯಮಿ ಲಯನ್ ನಿತ್ಯಾನಂದ ನಾವರ ಅವರ ಮಾಲಕತ್ವದ ಎನ್.ಎನ್. ಬಾಟ್ಲಿಂಗ್ ಕಂಪನಿಯಲ್ಲಿ ನಡೆದ ಗಣಹೋಮ, ಆಯುಧ ಪೂಜೆ, ವಾಹನ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷ ಪಿತಾಂಬರ ಹೆರಾಜೆ, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಆಮಂತ್ರಣ ಸಂಸ್ಥೆಯ ವಿಜಯಕುಮಾರ್ ಜೈನ್, ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಕೇಶವ ಪೂಜಾರಿ ಹಾಗೂ ಮತ್ತಿತರ ಗಣ್ಯರು ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿದರು.


ಸಂಸ್ಥೆಯ ಮಾಲಕರ ತಾಯಿ ಡೀಕಮ್ಮ, ಅಣ್ಣಿ ಪೂಜಾರಿ ಮತ್ತು ಪತ್ನಿ ಪುಷ್ಪಾವತಿ ಎನ್. ನಾವರ, ನಿಕ್ಷೇಪ್ ಎನ್. ನಾವರ, ಮೋಹಿನಿ, ರೇಖಾ ಓಬಯ ಪೂಜಾರಿ, ಸುಚಿತ್ರ ರಾಕೇಶ್, ರಾಹುಲ್ ಕನ್ಯಾಡಿ, ಸಂತೋಷ್ ಪೂಜಾರಿ ಕಡಂಬು, ಚೇತನ್ ಪೂಜಾರಿ ಕಡಂಬು, ಶರತ್ ಕುಂಜರ್ಪ ಮತ್ತಿತರ ಬಂಧು ಮಿತ್ರರು, ಸಂಸ್ಥೆಯ ಉದ್ಯೋಗಿಗಳು, ಬಂದಂತಹ ಅತಿಥಿಗಳನ್ನು ಸತ್ಕರಿಸಿ ಉಪಚರಿಸಿದರು. ನಾವರ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ನಾರಾಯಣ್ ರಾವ್ ಅವರು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.









