


ಬೆಳ್ತಂಗಡಿ: ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಶಿಬಾಜೆ ಶಾಖೆಯಿಂದ ನಿರ್ಮಾಣವಾಗುತ್ತಿರುವ ನೂತನ ನಾರಾಯಣ ಗುರು ಮಂದಿರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮರದ ಬಾಗಿಲನ್ನು ಹಸ್ತಾಂತರ ಮಾಡಿದರು. ಈಗಾಗಲೇ ಈ ಮಂದಿರದ ಎಲೆಕ್ಟ್ರಿಕಲ್ ಕಾಮಗಾರಿಗೆ ಸಹಕಾರವನ್ನು ನೀಡಿದ್ದು. ಮುಂದಿನ ಕೆಲಸ ಕಾರ್ಯಗಳಿಗೂ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆಯನ್ನು ನೀಡಿದರು.


ಶಿಬಾಜೆ ಎಸ್.ಎನ್.ಡಿ.ಪಿ ಶಾಖೆಯ ಅಧ್ಯಕ್ಷ ಎಂ.ಎನ್. ವಿಜಯನ್, ಕಾರ್ಯದರ್ಶಿ ಸುರೇಂದ್ರನ್, ಅಧ್ಯಕ್ಷ ಕೆ.ಕೆ. ವಿಜಯನ್, ಶಿಬಾಜೆ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ್ ರಾವ್, ಬೂತ್ ಸಮಿತಿ ಅಧ್ಯಕ್ಷ ಪಿ.ವಿ. ಸಿಬಿ, ವಸಂತ ಗೌಡ, ತಾಲೂಕು ಆರಾಧನಾ ಸಮಿತಿ ಸದಸ್ಯ ದಿನೇಶ್ ಶಿಬಾಜೆ, ಪ್ರಮುಖರಾದ ಪಿ.ವಿ. ಟೈಟಾಸ್, ಮತ್ತಿತರರು ಉಪಸ್ಥಿತರಿದ್ದರು.









