


ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೀಪಾವಳಿ ಆಚರಣೆಯನ್ನು ಸಂಭ್ರಮಿಸಲಾಯಿತು. ಪೂರ್ವ ಪ್ರಾರ್ಥಮಿಕ ವಿದ್ಯಾರ್ಥಿಗಳಿಗೆ ಮಗು ಹಾಗೂ ತಂದೆ ಯೊಂದಿಗೆ ಗ್ರೀಟಿಂಗ್ ಕಾರ್ಡ್ ತಯಾರಿಯ ಸ್ಪರ್ಧೆಯನ್ನು ನೆರವೇರಿಸಲಾಯಿತು.
ಪ್ರಾರ್ಥಮಿಕ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಯ ಶೃಂಗಾರ ಸ್ಪರ್ಧೆಯನ್ನು ಆಯೋಜಿಸಲಾಯಿತು. 9ನೇ ಎ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರೆ 9ನೇ ಬಿ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಹಂಚಿಕೊಂಡರು.


ಮುಖ್ಯ ಅತಿಥಿಯಾಗಿ ಉಜಿರೆ ಎಸ್. ಡಿ. ಎಂ ಮಹಿಳಾ ಪೊಲಿಟೆಕ್ನಿಕ್ ಪ್ರಾಂಶುಪಾಲ ಪ್ರಕಾಶ್ ಕಾಮತ್ ಭಾಗವಹಿಸಿ ಶುಭಾಶಯ ವ್ಯಕ್ತಪಡಿಸಿದರು. ದೀಪಾವಳಿಯ ಆಚರಣೆಯಲ್ಲಿ ನಮ್ಮ ಸಂಸ್ಥೆಗಳು ಮಕ್ಕಳಿಗೆ ಹೊಸ ಮೆರಗನ್ನು ನೀಡುತ್ತಿದೆ ಎಂಬುದರೊಂದಿಗೆ, ದೀಪ, ಹಣತೆ ಬೆಳಗಿಸಿ, ಲಕ್ಷ್ಮಿ ಪೂಜೆಯೊಂದಿಗೆ, ದೀಪಾವಳಿಗೆ ನೀರು ತುಂಬಿಸುವ ವಿಶೇಷತೆಯೊಂದಿಗೆ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮುಖ್ಯ ಶಿಕ್ಷಕಿ ಹೇಮಲತಾ ಎಂ. ಆರ್. ಮಾರ್ಗದರ್ಶನದಲ್ಲಿ ಶಿಕ್ಷಕರುಗಳಾದ ಮೇನಿತಾ ಶೆಟ್ಟಿ, ಚೇತನ, ಕಾರುಣ್ಯ, ಮುರಳಿ, ಪ್ರಮೀಳಾ ರವರ ಸಂಘಟನೆಯೊಂದಿಗೆ ಅಧ್ಯಾಪಕ ವೃಂದದವರ ಸಹಕಾರದೊಂದಿಗೆ ದಿಶಾ ಡಿ.ಎ. ಸ್ವಾಗತಿಸಿದರು. ನಿರೂಪಣೆಯಲ್ಲಿ ನಿಧಿಶಾ, ಮತ್ತು ಆಧ್ಯಾ ಜೈನ್ ಧನ್ಯವಾದವಿತ್ತರು.









