ಬೆಳ್ತಂಗಡಿ: ಅ.20ರಂದು ಕಲ್ಬೆಟ್ಟು ಮೋಟಾರ್ ಡ್ರೈವಿಂಗ್ ಸ್ಕೂಲ್ ಸಂಸ್ಥೆ ಶುಭಾರಂಭಗೊಂಡಿತು. ಮಾಲಕರಾದ ತೀಕ್ಷಿತ್ ಕೆ. ದಿಡುಪೆ ಅವರು, ABVP ಹಿರಿಯ ಕಾರ್ಯಕರ್ತ ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯರು ಹಾಗೂ ಬೆಳ್ತಂಗಡಿ ತಾಲೂಕು ಸಂಚಾಲಕ ಮತ್ತು ನಗರ ಕಾರ್ಯದರ್ಶಿಯಾಗಿ ವಿವಿಧ ಕಾರ್ಯ ಚಟುವಟಿಗೆಯಲ್ಲಿ ಜವಾಬ್ದಾರಿ ವಹಿಸಿದ್ದರು. ಹಾಗೂ ಪ್ರಸ್ತುತ ಧಾರ್ಮಿಕ, ಸಾಮಾಜಿಕ ವಿವಿಧ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ.

ನೂತನ ಕಲ್ಬೆಟ್ಟು ಮೋಟಾರ್ ಡ್ರೈವಿಂಗ್ ಸ್ಕೂಲ್ ಸಂಸ್ಥೆಯನ್ನು ನಡೆಸಲು ಪ್ರಾರಂಭಿಸಿರುತ್ತಾರೆ. ಈ ಶುಭಾರಂಭದ ಉದ್ಘಾಟನೆಯನ್ನು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಉದ್ಘಾಟನೆ ನಡೆಸಿ ಶುಭ ಕೋರಿದರು.


ಉಮೇಶ್ ಗೌಡ ನಂದಿಕಾಡು (CET) PU ಬೋರ್ಡ್ ಬೆಂಗಳೂರು, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ ಪುಷ್ಪಗಿರಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೊರಗಪ್ಪ ನಾಯಕ್, ವಾಣಿ ಶಿಕ್ಷಣ ಸಂಸ್ಥೆ ನಿರ್ದೇಶಕ ನಾರಾಯಣ ಗೌಡ ದೇವಸ್ಯ ಹಾಗೂ ಮುಂಡಾಜೆ CA ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನಕುಮಾರ್ ಪರಂಜಪೆ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮಹಾಬಲ ಗೌಡ, ಬಂಗಾಡಿ CA ಬ್ಯಾಂಕ್ ನಿರ್ದೇಶಕ ಶೀನಪ್ಪ ಗೌಡ ನೇತ್ರಕೊಡಂಗೆ, ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ನವೀನ್ ಗೌಡ, ವಾಣಿ ಸೌವಾರ್ದ ಕೋ ಆಪರೇಟಿವ್ ನಿರ್ದೇಶಕ ಸುರೇಶ್ ಗೌಡ, ಒಕ್ಕಲಿಗ ಸಂಘದ ಗ್ರಾಮ ಸಮಿತಿ ಅಧ್ಯಕ್ಷ ಆನಂದ ಗೌಡ ಮೈರ್ನೋಡಿ ಹಾಗೂ ಮನೆಯವರು ಹಾಗೂ ಸಾರ್ವಜನಿಕರು, ಗಣ್ಯರು ಭಾಗವಹಿಸಿದ್ದರು.