ಮಂಗಳೂರು: ಮಹೇಶ್ ಶೆಟ್ಟಿ ಗಡಿಪಾರು ಆದೇಶದ ಬಗ್ಗೆ ಎಸ್ ಪಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಆ ಪ್ರಕಾರ “
ಮಹೇಶ್ ಶೆಟ್ಟಿ ತಿಮರೋಡಿಗೆ ಜಿಲ್ಲೆಯಿಂದ ಒಂದು ವರ್ಷ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತರು(ಎಸಿ) ಆದೇಶ ಹೊರಡಿಸಿರತ್ತಾರೆ ಅವರಿಗೆ ಅದನ್ನು ಜಾರಿ ಮಾಡಲಾಗುತ್ತದೆ.
ಪೊಲೀಸರು ಅಥವಾ ನ್ಯಾಯಾಲಯ ನೋಟಿಸ್ ಜಾರಿ ಮಾಡಿದಾಗ ಜಿಲ್ಲೆಯನ್ನು ಪ್ರವೇಶಿಸಲು ಅವಕಾಶ ನೀಡಲಾಗಿದೆ.
ಪೊಲೀಸರ ಪರವಾಗಿ ಡಿಎಸ್ಪಿ ಬಂಟ್ವಾಳ ಮತ್ತು ತಿಮರೋಡಿ ಪರವಾಗಿ ವಕೀಲರು ಪ್ರಕರಣವನ್ನು ಮಂಡಿಸಿದರು. ಸರ್ಕಾರ ಅಥವಾ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿರುತ್ತದೆ.”ಎಂದು ತಿಳಿಸಲಾಗಿದೆ.