ಬೆಳಾಲು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಫದ 2024- 25ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. 23ರಂದು ಬೆಳಾಲು ಶ್ರೀ ಧ. ಮಂ. ಪ್ರೌಢ ಶಾಲೆಯಲ್ಲಿ ಸಂಘದ ಅಧ್ಯಕ್ಷ ಹೆಚ್. ಪದ್ಮ ಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಉಪಾಧ್ಯಕ್ಷ ದಿನೇಶ ಎ. ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಗೌಡ ವರದಿ ವಾಚಿಸಿದರು. ನಿರ್ದೇಶಕರಾದ ಸುರೇಂದ್ರ ಗೌಡ, ದಾಮೋದರ ಗೌಡ, ರಾಜಪ್ಪ ಗೌಡ, ರಮೇಶ ಗೌಡ, ಪ್ರವೀಣ್ ವಿಜಯ್, ಶೀನಪ್ಪ ಗೌಡ, ಸೀತಾರಾಮ ಬಿ. ಎಸ್., ಚಿಂಕ್ರ, ಸುಕನ್ಯ, ಹೇಮಾವತಿ ಉಪಸ್ಥಿತರಿದ್ದರು. ಸಭೆಯಲ್ಲಿ ಸದಸ್ಯರ ಕಲ್ಯಾಣ ನಿಧಿಯಿಂದ ವೈದ್ಯಕೀಯ ನೆರವು ನೀಡಲಾಯಿತು.
ನಿರ್ದೇಶಕ ಸುರೇಂದ್ರ ಗೌಡ ವಂದಿಸಿದರು.