ಮಚ್ಚಿನ: ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಮಚ್ಚಿನ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಸೆ.23ರಂದು ನಡೆಯಿತು.
ಸಂಘದ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಅದ್ಯಕ್ಷತೆ ವಹಿಸಿ ಮಾತನಾಡಿ ಸಂಘದಲ್ಲಿ ಒಟ್ಟು ರೂ.4,83,080 ಲಕ್ಷ ಲಾಭಗಳಿಸಿದ್ದು ಸದಸ್ಯರಿಗೆ ಪ್ರತೀ ಲೀಟರ್ ಹಾಲಿಗೆ 95ಪೈಸೆಯಂತೆ 65% ಬೋನಸ್, ಡಿವಿಡೆಂಡ್ 14% ಘೋಷಿಸಿದರು. ಸಂಘದಲ್ಲಿ ಹಾಲು ಹೆಚ್ಚು ಹೆಚ್ಚು ಸಂಗ್ರಹವಾಗುವಂತೆ ಸದಸ್ಯರು ಸಹಕರಿಸಬೇಕಾಗಿ ವಿನಂತಿ. ಹಾಲು ಸಂಗ್ರಹ ಕಡಿಮೆ ಯಾಗಿದೆ. ಸರಾಸರಿ 1000ಹಾಲು ಸಂಗ್ರಹ ವಾದರೆ ಹೆಚ್ಚು ಲಾಭ ಗಳಿಸಲು ಸಾಧ್ಯ. ಇದರಿಂದ ಸಂಘಕ್ಕೆ ನೂತನ ಸಭಾ ಭವನ ನಿರ್ಮಾಣವು ಮಾಡಲು ಸಾಧ್ಯ. ಹಾಲಿನ ಸಂಗ್ರಹ ಕಡಿಮೆಯಾದರಿಂದ ಕಾಮಗಾರಿ ಪ್ರಾರಂಭ ಮಾಡಿಲ್ಲ ಎಂದು ಹೇಳಿದರು. ವೇದಿಕೆಯಲ್ಲಿ ದ.ಕ.ಹಾಲು ಒಕ್ಕೂಟ ವಿಸ್ತರಣಾಧಿಕಾರಿ ರಾಜೇಶ್, ಪಶು ವೈದ್ಯಾಧಿಕಾರಿ ಡಾ.ಪೂಜಾ ಪಶುಗಳ ಪೋಷಣೆ, ಹಾಲಿನ ಇಳುವರಿ ಯಾವ ರೀತಿಯಲ್ಲಿ ಹೆಚ್ಚಿಸುವ ಬಗ್ಗೆ, ಕರು ರಕ್ಷಣೆ, ಪಶು ಆಹಾರ ಯಾವ ರೀತಿಯಲ್ಲಿ ಉಪಯೋಗಿಸುವ ಬಗ್ಗೆ ಪಶುಗಳಿಗೆ ಔಷದಿ ಬಳಸುವ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಪಿ.ಮಾಧವ ನಾಯ್ಕ, ನಿರ್ದೇಶಕರಾದ ಕೆ.ವಿಶ್ವನಾಥ ಬಂಗೇರ, ನೋಣಯ್ಯ ಎಂ.ಕೆ., ಸದಾನಂದ ಪೂಜಾರಿ, ಶಿವರಾಮ ಬಂಗೇರ, ವನಿತಾ ಜಯರಾಮ, ಗುಲಾಬಿ, ರುಕ್ಮಿಣಿ , ಶಾಂತಮ್ಮ, ಮೋನಪ್ಪ ಮೂಲ್ಯ, ಯುವರಾಜ್ ಜೈನ್ ಉಪಸ್ಥಿತರಿದ್ದರು.
2024-25ನೇ ಸಾಲಿನ ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ನಿರ್ದೇಶಕ ಕೆ.ವಿಶ್ವನಾಥ ಬಂಗೇರ ಸ್ವಾಗತಿಸಿದರು. ಕಾರ್ಯದರ್ಶಿ ಚಂದಪ್ಪ ಸಾಲಿಯಾನ್ ವರದಿ ಲೆಕ್ಕ ಪತ್ರ ಮಂಡಿಸಿದರು. ಸಿಬ್ಬಂದಿ ಸಂತೋಷ್ ಕುಮಾರ್, ಇಂದಿರಾ ಸಹಕರಿಸಿದರು.