ಬೆಳ್ತಂಗಡಿ: ಮೊಬೈಲ್, ಇಂಟರ್ನೆಟ್ ಕಾಲದಲ್ಲಿ ವಿದ್ಯಾರ್ಥಿಗಳು ಸಹಪಠ್ಯ ಚಟುವಟಿಕೆ, ಆಟಓಡಾಟಗಳಿಂದ, ತುಳು ಸಂಸ್ಕೃತಿಯಿಂದ ದೂರ ಉಳಿಯುತ್ತಿದ್ದಾರೆ. ಈ ದೂರವು ಮುಂದಿನ ತಲೆಮಾರುಗಳಿಗೆ ಬಹಳ ಗಂಭೀರವಾಗಿ ತಟ್ಟಲಿದೆ, ಹಾಗಾಗಿ ವಿದ್ಯಾರ್ಥಿಗಳಿಗೆ ಆಟ, ಕರಕುಶಲಕಲೆಗಳ, ತುಳುಲಿಪಿ- ಸಂಸ್ಕೃತಿಯ ಪರಿಚಯ ಮಾಡಿಸುನ ದಿಟ್ಟಿಯಲ್ಲಿ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ ನ ಮುತುವರ್ಜಿಯಲ್ಲಿ ಕರಂಬಾರು ಸ.ಹಿ.ಪ್ರಾ. ಶಾಲೆಯಲ್ಲಿ “ಬೊಳ್ಳಿದೋಟಡ್ ಬಂಗಾರ್ ಪುರ್ಪೊಲೆನೊಟ್ಟುಗು” ಎಂಬ ಉಪಶೀರ್ಷಿಕೆಯ ‘ಶಾಲೆಡೊಂಜಿ ದಿನ’ ಎಂಬ ವೈವಿಧ್ಯಮಯ ಕಾರ್ಯಕ್ರಮ ಸೆ.20ರಂದು ಮುಂಜಾನೆಯಿಂದ ಸಂಜೆಯವರೆಗೆ ನಡೆಯಿತು.
ಬೆಳಗ್ಗೆ 9:30ರ ಸುಮಾರಿಗೆ ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿಉವ ಮೂಲಕ ಉದ್ಘಾಟಿಸಿ, ಸಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಪುಷ್ಪರಾಜ್ ಎಂ.ಕೆ. ಮಾತನಾಡಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಹಾಗೂ ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆ ಷೋಷಿಸುವ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅದರೊಂದಿಗೆ ಇಂತಳ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಲ್ಲಿ ಇನ್ನಷ್ಟು ಸಹಕಾರಿಯಾಗಲಿವೆ ಎಂದು ಹೇಳಿ ಶುಭಹಾರೈಸಿದರು.
ನಂತರ ಮಕ್ಕಳಿಗೆ ಮಡಲ್ ಮೊಡೆಯಲು, ಮೂಡೆ ಕಟ್ಟಲು, ಹಾಗೆಯೇ ಒಲಿಯಲ್ಲಿ ಬೇರೆ ಬೇರೆ ವಿನ್ಯಾಸಗಳನ್ನು, ಚೆನ್ನೆಮಣೆ, ಡೊಂಕ, ಪೊಕ್ಕು ಇಂತಹ ದೇಸೀ ಆಟಗಳನ್ನು ಕಲಿಸಲಾಯಿತು. ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ನ ಗೌರವಾಧ್ಯಕ್ಷ ಮಹಿ ಮುಲ್ಕಿ ಮಕ್ಕಳಿಗೆ ಮಡಲ್ ಮೊಡೆಯಲು, ಹಾಗೆಯೇ ವರುಣ್ ಗಟ್ಟಿ ಮೂಡೆ ಕಟ್ಟಲು ಕಲಿಸಿಕೊಟ್ಟರು. ಸುಕೇಶ್, ಸುಶಾನ್, ಬ್ಲೆನ್ಸನ್, ನಿಹಾಲ್ ಪೈ, ಅಕ್ಷಯ್ ಕುಮಾರ್, ಪೃಥ್ವಿ ಹಾಗೂ ದಿವಾಕರ್ ಉಬಾರ್ ಸಹಕರಿಸಿದರು. ನಿಶ್ಚಿತ್ ಪೊಕ್ಕು ಡೊಂಕ ಆಟ ನಡೆಸಿಕೊಟ್ಟರು. ಪುಷ್ಪರಾಜ್ ಎಂ. ಕೆ., ದಿವಾಕರ್ ಉಬಾರ್ ಚೆನ್ನೆಮಣೆ ಆಟ ಕಲಿಸಿಕೊಟ್ಟರು.
ಮಧ್ಯಾಹ್ನದ ನಂತರ ಮಕ್ಕಳಿಗೆ ಮಹಿ, ಸುಕೇಶ್, ಪೃಥ್ವಿ ತುಳು ಲಿಪಿಯ ಪರಿಚಯ ಕೊಟ್ಟು ತಮ್ಮ ತಮ್ಮ ಹೆಸರನ್ನು ತುಳು ಲಿಪಿಯಲ್ಲಿ ಬರೆಯಲು ತಿಳಿಸಿಕೊಟ್ಟರು. ತುಳು ಸಂಬಂಧಿತ ವಿಷಯಗಳ ಆಧಾರದಲ್ಲಿ ಜ್ಞಾಪಕ ಶಕ್ತಿ ಸ್ಪರ್ಧೆ ನಡೆಯಿತು. ನಿಶ್ಚಿತ್ ರಾಮಕುಂಜ ಮಕ್ಕಳಿಗೆ ಡೆನ್ನನ ಡೆನ್ನಾನ ತುಳು ಪದ್ಯ ಹೇಳಿಕೊಟ್ಟರು.
ವಿದ್ಯಾರ್ಥಿ ಯಶ್ಮಿತ್ ಆಚಾರ್ಯ ಪ್ರಾರ್ಥನೆ ಹಾಡಿದರು. ಉದ್ಘಾಟನಾ ಸಮಾರಂಭದಲ್ಲಿ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ನ ಅಧ್ಯಕ್ಷ ನಿಶ್ಚಿತ್ ಜಿ. ರಾಮಕುಂಜ ಸ್ವಾಗತಿಸಿದರು. ಶಾಲಾ CRP ಕಿರಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕ ಸದಾಶಿವ ಧನ್ಯವಾದ ಅರ್ಪಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ ನಿಂದ ಶಾಲೆಗೆ ಸಿಸಿಟಿವಿ ಉಡುಗೊರೆ ನೀಡಲಾಯಿತು. ಶಾಲಾಭಿವೃದ್ಧಿ ಸಮಿತಿಯ ಪುಷ್ಪರಾಜ್ ಮಾತನಾಡಿ ಇಂತಹ ಕಾರ್ಯಕ್ರಮಗಳು ಇಂದಿನ ಅವಶ್ಯಕತೆಗಳು, ಇದರ ಜೊತೆಗೆ ತುಳು ಸಂಸ್ಕೃತಿಯ ಮೂಲ ಕೃಷಿಚಟುವಟಿಕೆಯಲ್ಲಿ ಮಾಡುವಂತಹ ಪುಣಿ ಕಟ್ಟುನ, ಕಣಿ ಕೆತ್ತುನ ಇಂತಹ ಸಾಗುವಳಿ ಸಂಬಂಧಿತ ಚಟುವಟಿಕೆಗಳನ್ನು ತಿಳಿಸಿಕೊಟ್ಟರೆ ಇನ್ನೂ ಉತ್ತಮ ಎಂಬ ಅಭಿಪ್ರಾಯ ಹಂಚಿಕೊಂಡರು. ಶಾಲೆಯ ಮುಖ್ಯ ಶಿಕ್ಷಕರು ರಮೇಶ್ ಚೌಹಾನ್ ಮಾತನಾಡಿ, ತುಳು ನೆಲ, ಜಲ, ಗಾಳಿಯ ರಕ್ಷಣೆ ಪ್ರತೀ ತುಳುವನ ಕರ್ತವ್ಯ ಎಂದು ಹೇಳಿದರು ಹಾಗೆಯೆ ಫೌಂಡೇಶನ್ನ ಈ ಕಾರ್ಯವನ್ನು ಶ್ಲಾಘಿಸಿದರು.
ಶಾಲಾ ಶಿಕ್ಷಕರು ಸಾವಿತ್ರಿ, ಸದಾಶಿವ, ಚೈತ್ರಾ ಶೆಟ್ಟಿ ಹಾಗೆಯೇ ಇತರ ಅತಿಥಿ ಶಿಕ್ಷಕರ ಸಹಕಾರದಿಂದ ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತು. ವಿದ್ಯಾರ್ಥಿಗಳ ಪೋಷಕರು, ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಭಾಗವಹಿಸಿದರು. ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ನ ಸದಸ್ಯ ಸುಕೇಶ್ ಮಕ್ಕಳಿಗೆ ಸ್ಟೇಷನರಿ ವಸ್ತುಗಳನ್ನು ಹಂಚಿದರು. ಸ್ಥೀಯರೂ, ಫೌಂಡೇಷನ್ನ ಸದಸ್ಯರೂ ಆಗಿರುವ ಪೃಥ್ವಿರಾಜ್ ಇವರ ಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸುಕೇಶ್ ತುಳುನಾಡ ಗೀತೆ ಹಾಡಿದರು, ಮಹಿ ಮುಲ್ಕಿ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯ ಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಶೋಭ, ವಸಂತ ನಾಯ್ಕ, ಶಿಕ್ಷಕರಾದ ಸಾವಿತ್ರಿ, ತಸ್ಮಿಯ, ಚೈತ್ರಾ, ಸ್ವಾತಿ, ಬಿಸಿ ಊಟ ನೌಕರರಾದ ಜಯಂತಿ, ಚಂದ್ರಾವತಿ, ಶಾಲಾ ಮಕ್ಕಳು ಮಕ್ಕಳ ಪೋಷಕರು ಪಾಲ್ಗೊಂಡಿದ್ದರು. ನಿಶ್ಚಿತ್ ರಾಮಕುಂಜ ಸ್ವಾಗತಿಸಿ, ಫೌಂಡೇಷನ್ನ ಕಾರ್ಯದರ್ಶಿ ಸುಶಾನ್ ಕೋಟ್ಯನ್ ವಂದಿಸಿದರು.