ಉಜಿರೆ: ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಮ್ಮನ್ನು ನಾವು ಹೆಚ್ಚು ಹೆಚ್ಚು ತೊಡಗಿಸಿಕೊಂಡಾಗ ಅದರಲ್ಲೂ ಜವಾಬ್ದಾರಿಯನ್ನು ಸ್ವೀಕರಿಸಿ ನಿರ್ವಹಿಸುವುದರಿಂದ ಈ ರೀತಿಯ ಜೀವಂತಿಕೆಯನ್ನು ಇದು ಸೃಷ್ಟಿಸುತ್ತದೆ ಎಂದು ಹೇಳುತ್ತಾ ಮೊದಲಿಗೆ ಈ ಕಾರ್ಯಕ್ರಮ ಸಂಯೋಜನೆ ಮಾಡಿದ ಸಂಘಟಕರಿಗೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿದ ಅವರು ಉಜಿರೆ ಎಸ್.ಡಿ.ಎಂ ಮಹಿಳಾ ಐ.ಟಿ.ಐ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು.

ಇದರ ಜೊತೆಗೆ ಭಿತ್ತಿ ಪತ್ರಿಕೆ ಅನಾವರಣ ಮಾಡಿ ಮಾತನಾಡಿ, ನಾವು ಸಂಘಟಿತರಾಗಿ ಸಿಕ್ಕ ಇಂತಾಹ ಅವಕಾಶವನ್ನು ಸದುಪಯೋಗಪಡಿಸಿಕೊಂಡಾಗ, ಅದು ನಮ್ಮ ಅಂಜಿಕೆಯನ್ನು ಹೋಗಲಾಡಿಸಿ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡುತ್ತದೆ.

ಹೆಚ್ಚು ಹೆಚ್ಚು ದುಡಿಯುವ ಮೂಲಕ ಆರ್ಥಿಕವಾಗಿ ಸಬಲರಾಗಲು ಪ್ರಯತ್ನಿಸಿ. ಯಾರಿಗೂ ಅವಲಂಬಿತರಾಗದೆ, ಯಾರಿಗೂ ನಿಮ್ಮನ್ನು ನೀವು ಹೋಲಿಕೆ ಮಾಡದೆ, ಯಾರೊಂದಿಗೂ ಮನಸ್ಥಾಪ ಮಾಡದೆ ಬಂದ ಅವಕಾಶಗಳನ್ನು ಜವಾಬ್ದಾರಿಯುತವಾಗಿ ಅಳವಡಿಸಿಕೊಳ್ಳಿ, ತಂದೆ ತಾಯಿಗೆ ಗೌರವ ನೀಡಿ ಎಂದು ಹೇಳಿ ಕಾರ್ಯಕ್ರಮಕ್ಕೆ ಹಾಗೂ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಫಾತಿಮತ್ ಅರ್ಫಾನ ಕಾರ್ಯಕ್ರಮ ನಿರೂಪಿಸಿದರು.