ಬರಂಗಾಯ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025 26ನೇ ಸಾಲಿನಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಲಾಯಿತು. ಉದ್ಘಾಟನೆಯನ್ನು ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ವಿಜ್ಞಾನಿ ಗೋಪಾಲ್ ಮರಾಠೆ ಕೆದಿಹಿತ್ಲು ಹಾಗೂ ಶಾಲೆಯ ಸಂಸ್ಥಾಪಕ ಕುಟುಂಬಸ್ಥರಾದ ಶಿವರಾಮ್ ರಾವ್ ಕೊಡಂಗೆ ಅವರು ನೆರವೇರಿಸಿದರು.
ಮಂಗಳೂರು ಟೈಮ್ಸ್ ನಿರ್ದೇಶಕ ಗಣೇಶ್ ಹೆಬ್ಬಾರ್ ಮೇರ್ಲ, ಉಜಿರೆ ಅಭ್ಯಾಸ್ ಕಾಲೇಜು ಉಪಪ್ರಾಂಶುಪಾಲ ಚಂದ್ರಶೇಖರ್ ಗೌಡ ಕಜೆ, ಮಾಜಿ ಅಧ್ಯಕ್ಷ ಪ್ರವೀಣ್ ಹೆಬ್ಬಾರ್, ನಿಡ್ಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ, ಕೃಷ್ಣಕುಮಾರ್ ಕಾಟ್ಲಮಾಜಿ, ರುಕ್ಮಯ್ಯ ಪೂಜಾರಿ, ಜಯಶ್ರೀ ಹಾಗೂ ಪಂಚಾಯತ್ ಸದಸ್ಯರು, ಎಸ್.ಡಿ.ಎಮ್.ಸಿ ಸದಸ್ಯರು, ಪೋಷಕ ವೃಂದದವರು, ಸಂಘ ಸಂಸ್ಥೆಯವರು, ಪ್ರಗತಿ ಬಂಧು ಒಕ್ಕೂಟದ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಉಪಸ್ಥರಿದ್ದರು.