ಬೆಳ್ತಂಗಡಿ: ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಆ ಪ್ರಯುಕ್ತ ಸಂಘದಿಂದ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ಸೆ.14ರಂದು ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು. ಸಂಘದ ಅಧ್ಯಕ್ಷ ರಮೇಶ್ ಗೌಡ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಉಪಾಧ್ಯಕ್ಷ ಸೂರ್ಯನಾರಾಯಣ ಹೊಳ್ಳ, ನಿರ್ದೇಶಕರಾದ ಶಿವಪ್ರಸಾದ್, ರಾಧಾಕೃಷ್ಣ, ಮಂಜುನಾಥ್, ಶ್ರೀನಿವಾಸ, ಪುಷ್ಪಲತಾ, ಗೀತಾ, ದೇಜಪ್ಪ ಪೂಜಾರಿ ಹಾಗೂ ಸಂಘದ ಸಹಾಯಕಿ ಸಂಧ್ಯಾ ಉಪಸ್ಥಿತರಿದ್ದರು.