ಬೆಳ್ತಂಗಡಿ: ಶ್ರೀನಿವಾಸ ನಾಯ್ಕ್ ಮುಂಡಾಜೆ ಅವರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದು ಕೆಲಸ ಮಾಡುವಾಗ ಕಟ್ಟಡದಿಂದ ಬಿದ್ದು ದೇಹದ ಸ್ವಾಧೀನ ಕಳೆದುಕೊಂಡು ಮಲಗಿದ ಪರಿಸ್ಥಿತಿಯಲ್ಲಿ ಇದ್ದು ಕುತ್ತಿಗೆ ಮತ್ತು ಕೈಗಳು ಚಲನೆರಹಿತವಾಗಿವೆ. ಮಲಮೂತ್ರ ಕೂಡ ಕ್ರತಕ ವಿಧಾನದಿಂದ ಮಾಡಬೇಕಾದ ಸ್ಥಿತಿಯಿದ್ದು ಆಸ್ಪತ್ರೆಯ ಚಿಕಿತ್ಸೆಯ ನಂತರ ಸೇವಾಧಾಮ ಸೌತಡ್ಕದಲ್ಲಿ ಪುನಶ್ಚೇತನ ಗೊಂಡು ವಿಲ್ ಚೈಯರ್ ನಲ್ಲಿ ಕುಳಿತುಕೊಳ್ಳುವಷ್ಟು ಸಕ್ಷಮ ಹೊಂದಿರುತ್ತಾರೆ.
ಇವರು ಬಿ.ಎಂ.ಎಸ್ ಸದಸ್ಯರಾಗಿದ್ದು ಬಿ.ಎಂ.ಎಸ್ ಬೆಳ್ತಂಗಡಿ ಕಛೇರಿಯ ಸಹಾಯದೊಂದಿಗೆ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸಿಗುವ ಪರಿಹಾರಕ್ಕೆ ಅರ್ಜಿ ಮಾಡಲು ಅನ್ ಲೈನ್ ನಲ್ಲಿ ಪ್ರಯತ್ನಿಸಲಾಗಿತ್ತು. ಅರ್ಜಿ ಸಲ್ಲಿಸಿಸಲು ಪ್ರಯತ್ನಿಸಿದಾಗ ಪೋರ್ಟಲ್ ತೊಂದರೆಯಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ ಈ ಬಗ್ಗೆ. ನೇರವಾಗಿ ಕಾರ್ಮಿಕರ ಕಲ್ಯಾಣ ಮಂಡಳಿಗೆ ಅರ್ಜಿ ಸಲ್ಲಿಸಿ ಪೊರ್ಟಲ್ ದೋಷ ಕಾರಣದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗುತಿಲ್ಲ ಮತ್ತು ಇವರಿಗೆ ಪೆನ್ಶನ್ ಮತ್ತು ಪರಿಹಾರವನ್ನು ನೀಡುವಂತೆ ಮ್ಯಾನ್ಲುವಲ್ ಪತ್ರ ಬರೆದು ಪರಿಹಾರ ಮತ್ತು ಪಿಂಚಣಿ ಕೊಡಿಸಲು ಪ್ರಯತ್ನಿಸಲಾಗಿತ್ತು.
ಆದರೆ ಈ ಅರ್ಜಿಗೆ ಯಾವುದೇ ಸ್ಪಂದನೆ ಬಾರದೇ ಇದ್ದ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರ ಸಹಾಯವನ್ನು ಪಡೆದುಕೊಂಡು ಅವರಿಂದ ಕಾರ್ಮಿಕ ಸಚಿವರಿಗೆ ಪತ್ರ ಬರೆದು ಕಾರ್ಮಿಕ ಸಚಿವರು ಕಾರ್ಮಿಕ ಕಲ್ಯಾಣ ಮಂಡಳಿಗೆ ಶಿಫಾರಸು ಪತ್ರವನ್ನು ಕಳಿಸಿಕೊಟ್ಟರೂ ಅರ್ಜಿಯ ಸಂದರ್ಭದಲ್ಲಿ ನೀಡಿದ ಕಾರಣ ಸರಿಯಾದದ್ದು ಅಲ್ಲ ಎಂದು ಕ್ಲೇಮ್ ನಿರಾಕರಣೆ ಮಾಡಲಾಗಿತು. ನಂತರ ಸೇವಾಧಾಮದ ಸಂಸ್ಥಾಪಕರು ಮತ್ತು ದಿವ್ಯಾಂಗ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವಿನಾಯಕ ರಾವ್ ಕನ್ಯಾಡಿ ಅವರನ್ನು ಕಾರ್ಮಿಕ ಮಂಡಳಿ ಬೆಂಗಳೂರು ಇದರ ಮುಖ್ಯಕಾರ್ಯನಿರ್ವಣಾಧಿಕಾರಿ ಭಾರತಿ ಅವರನ್ನು ಭೇಟಿ ಮಾಡಿಸಿ ಶ್ರೀನಿವಾಸ್ ನಾಯ್ಕ್ ಅವರ ಹಾಗೂ ಬೆನ್ನುಹುರಿ ಅಪಘಾತಕ್ಕೆ ಒಳಗಾದ ಕಾರ್ಮಿಕರ ಭವಿಷ್ಯಕ್ಕಾಗಿ ಮಂಡಳಿಯಲ್ಲಿ ವಿಶೇಷ ಸಹಾಯಗಳನ್ನು ನೀಡುವಂತೆ ವಿನಂತಿಸಲಾಗಿತ್ತು.
ಸ್ಪಂದಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇದಕ್ಕೆ ಸಹಾಯ ಮಾಡುವೆವೆಂದು ತಿಳಿಸಿದ್ದರು. ನಂತರ ಇದರ ಪ್ರಕ್ರಿಯೆ ಬಹಳ ತಡವಾಗಿದ್ದು ಈ ಬಗ್ಗೆ ಹಲವಾರು ಬಾರಿ ಬಿ.ಎಂ.ಎಸ್. ನ ಯೂನಿಯನ್ ನಿಂದ ನಿರಂತರ ಪ್ರಯತ್ನ ಮಾಡಲಾಗುತ್ತಿತ್ತು. ಹಲವು ಸಲ ಬೆಂಗಳೂರು ಮತ್ತು ಕಾರ್ಮಿಕ ಇಲಾಖಾಧಿಕಾರಿಗಳನ್ನು ಭೇಟಿ ಮಾಡಲಾಗಿತ್ತು. ಇತ್ತೀಚಿಗೆ ಬೆಂಗಳೂರು ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಅಯೋಜಿಸಲಾಗಿದ್ದ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿ ಅಧಿಕಾರಿಗಳ ಬೇಜವಾಬ್ದಾರಿಯನ್ನು ಖಂಡಿಸಲಾಗಿತ್ತು .ಅತ್ಯಂತ ಪ್ರಯಾಸದ ನಂತರ ಶ್ರೀನಿವಾಸ್ ನಾಯ್ಕ್ ಅವರಿಗೆ ಒಂದು ಲಕ್ಷ ಅರವತ್ತೆರಡು ಸಾವಿರ ಪರಿಹಾರ ಮತ್ತು ತಿಂಗಳಿಗೆ 2000 ಪೆನ್ಶನ್ ಮಂಜುರಾಗಿರುತ್ತದೆ ಎಂದು ಬಿ.ಎಂ.ಎಸ್ ರಾಜ್ಯ ಕಾರ್ಯದರ್ಶಿ ಅನುಜ್ ಜೈರಾಜ್ ಸಾಲಿಯಾನ್ ಕಾನರ್ಪ ತಿಳಿಸಿದ್ದಾರೆ.