ಸೆ.12: ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಿರುದ್ಯೋಗಿ ವಿಕಲಚೇತನರ ಉದ್ಯೋಗ ಪೂರ್ವ ಕೌಶಲ್ಯ ಶಿಬಿರ- ಉದ್ಯೋಗ ಆಯ್ಕೆ

0

ಬೆಳ್ತಂಗಡಿ: ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಮತ್ತು ತಾಲೂಕು ಪಂಚಾಯತ್ ಬೆಳ್ತಂಗಡಿ ಹಾಗೂ MRW, URW, VRW ಸಹಯೋಗದೊಂದಿಗೆ ಜಿಲ್ಲೆಯ ಯುವ ನಿರುದ್ಯೋಗಿ ವಿಕಲಚೇತನ ಉದ್ಯೋಗಾಂಕ್ಷಿಗಳಿಗೆ ಸೆ.12ರಂದು ಬೆಳಿಗ್ಗೆ 10 ಗಂಟೆಗೆ ಅಂಬೇಡ್ಕರ್ ಭವನ ಬೆಳ್ತಂಗಡಿಯಲ್ಲಿ ಉದ್ಯೋಗ ಪೂರ್ವ ನೋಂದಾಯಿಸುವ ಪ್ರಕ್ರೀಯೆ ಮತ್ತು ಸ್ವ-ಉದ್ಯೋಗ ಮಾಡಲು ಇಚ್ಚಿಸುವ ವಿಕಲಚೇತನ ಅಭ್ಯರ್ಥಿಗಳ ಆಯ್ಕೆಯ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದಕಾರಣ ತಾಲೂಕಿನ ಗ್ರಾಮೀಣ 18 ರಿಂದ 38 ವರ್ಷದೊಳಗಿನ ನಿರುದ್ಯೋಗಿ ವಿಕಲಚೇತನರು ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಶೈಕ್ಷಣಿಕ ದಾಖಲಾತಿಗಳ ಪ್ರತಿಗಳೊಂದಿಗೆ ಶಿಬಿರದಲ್ಲಿ ಭಾಗವಹಿಸುವುದರೊಂದಿಗೆ, ಸ್ಥಳೀಯ ಉದ್ಯೋಗಾವಕಾಶವನ್ನು ಪಡೆದುಕೊಳ್ಳಬಹುದಾಗಿದೆ.

ವಿಕಲಚೇತನರಿಗೆ ಅಸೋಸಿಯೇಷನ್ ಫಾರ್ ಪೀಪಲ್ ವಿತ್ ಡಿಸೆಬಿಲಿಟಿ (APD) ಸಂಸ್ಥೆಯು ₹10,000 ರಿಂದ ₹50,000 ರವರೆಗೆ ಉದ್ಯಮ ಬೆಂಬಲವನ್ನು ನೀಡಲಿದೆ.
ಅರ್ಹತಾ ಮಾನದಂಡಗಳು: ವಯಸ್ಸು: 18 ರಿಂದ 35 ವರ್ಷ, ಶಿಕ್ಷಣ: ಕನಿಷ್ಟ ಹತ್ತನೇ ತರಗತಿ ಉತ್ತೀರ್ಣ, APD ಕೊಡುಗೆ: ಗರಿಷ್ಠ ₹50,000, ಇಚ್ಛೆ: ಸ್ವಂತ ಉದ್ಯಮ ಪ್ರಾರಂಭಿಸಲು ನಿಜವಾದ ಆಸಕ್ತಿ ಇರಬೇಕು. ಆಸಕ್ತ ಅಭ್ಯರ್ಥಿಗಳು 12.09.2025ರಂದು ಸ್ಥಳಕ್ಕೆ ಬಂದು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9535225693 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here