ಬೆಳ್ತಂಗಡಿಯಲ್ಲಿ ಬಿ.ಎಂ.ಎಸ್ ಸಮನ್ವಯ ಸಭೆ

0

ಬೆಳ್ತಂಗಡಿ: ಭಾರತೀಯ ಮಜ್ದೂರು ಸಂಘ ಬೆಳ್ತಂಗಡಿ ತಾಲೂಕು ಘಟಕದ ಕಟ್ಟಡ ನಿರ್ಮಾಣ ಕಾರ್ಮಿಕರ, ರಿಕ್ಷಾ ಚಾಲಕ-ಮಾಲಕರ ಹಾಗೂ ರಬ್ಬರ್ ಕಾರ್ಮಿಕರ ಯೂನಿಯನ್‌ಗಳ ಸಂಯುಕ್ತ ಸಮನ್ವಯ ಸಭೆ ಸೆ.1ರಂದು ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸಭೆಗೆ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್, ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು., ಜಿಲ್ಲಾ ಕಾರ್ಯದರ್ಶಿ ಗೋಪಾಲ ಕೃಷ್ಣ, ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ, ಕುಮಾರ್ ನಾಥ್ ಕಲಮಂಜ ಹಾಗೂ ತಾಲೂಕು ಅಧ್ಯಕ್ಷ ಉದಯ ಬಂದಾರು ನೇತೃತ್ವ ವಹಿಸಿದ್ದರು.

ಸಭೆಯ ಆರಂಭ ಶ್ರಮಿಕ ಗೀತೆಯಿಂದಾಗಿ, ಸ್ವಾಗತ ಭಾಷಣವನ್ನು ತಾಲೂಕು ಅಧ್ಯಕ್ಷರು ಸಲ್ಲಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಮನಿಹಳ್ಳ ಸಮನ್ವಯ ಸಭೆಯ ಮಹತ್ವವನ್ನು ವಿವರಿಸಿದರು. ಬಳಿಕ ಮೂರು ಯೂನಿಯನ್‌ಗಳ ವರದಿ ಮಂಡನೆಯಾದ ನಂತರ, ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್ ಮತ್ತು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು., ಕಾರ್ಯದರ್ಶಿ ಗೋಪಾಲಕೃಷ್ಣ ಸಂಘಟನೆಯ ರಾಜ್ಯ-ಜಿಲ್ಲಾ ಮಟ್ಟದ ಚಟುವಟಿಕೆಗಳ ಮಾಹಿತಿ ನೀಡಿದರು.

ಸಭೆಯಲ್ಲಿ ಸಂಘಟನೆಯ ಉದ್ದೇಶ, ರಚನೆ ಹಾಗೂ ಮುಂದಿನ ಪ್ರಮುಖ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಿತು. ಸೆ.14ರಂದು ಶಿವಮೊಗ್ಗದಲ್ಲಿ ನಡೆಯಲಿರುವ 70ನೇ ವರ್ಷದ ರಾಜ್ಯಮಟ್ಟದ ಕುಟುಂಬ ಸಮೇತ ಕಾರ್ಯಕ್ರಮ, ಸೆ.17ರಂದು ವಿಶ್ವಕರ್ಮ ದಿನಾಚರಣೆ, ನ. 12ರಂದು ಬೆಂಗಳೂರು ರಾಜ್ಯಮಟ್ಟದ ಹೋರಾಟ ಸೇರಿದಂತೆ ಹಲವು ನಿರ್ಣಾಯಕ ಕಾರ್ಯಕ್ರಮಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು.
ಸಭೆಯು ಧನ್ಯವಾದದೊಂದಿಗೆ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here