
ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ನಲ್ಲಿ 1993ರಲ್ಲಿ ಹುನ್ಸೆಕಟ್ಟೆ ಎಂಬಲ್ಲಿ ನೀರು ಸರಬರಾಜು ವಿಭಾಗದಲ್ಲಿ ಸೇವೆಗೆ ಸೇರ್ಪಡೆಗೊಂದು ಸುಮಾರು 32 ವರ್ಷಗಳ ಕಾಲ ಬಿಲ್ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿ ಜು.31ಕ್ಕೆ ನಿವೃತ್ತಿ ಹೊಂದಿದ ಲಕ್ಷ್ಮೀನಾರಾಯಣ ಅವರಿಗೆ ಗೌರವಾರ್ಪಣೆ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವು ಜು.31ರಂದು ಪಟ್ಟಣ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಪಟ್ಟಣ ಪಂಚಾಯತ್ ನ ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳು ಸೇರಿ ನಿವೃತ್ತರಾದ ಲಕ್ಷ್ಮೀನಾರಾಯಣ ಅವರನ್ನು ಪಂಚಾಯತ ವತಿಯಿಂದ ಪೇಟಾ ತೊಡಿಸಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ಪಟ್ಟಣ ಪಂಚಾಯತ್ ನ ಅಧ್ಯಕ್ಷ ಜಯಾನಂದ ಗೌಡ ಮಾತನಾಡಿ ಪಂಚಾಯತ್ ನ ಹಲವಾರು ಕಾರ್ಯವೈಖರಿಗಳಲ್ಲಿ ಸಲಹೆ ನೀಡುತ್ತಾ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ತೆರಿಗೆ ವಿಧಿಸುವ ಅಚ್ಚುಕಟ್ಟಾದ ಕೆಲಸವನ್ನು ನಿಭಾಯಿಸಿರುವ, ಸೇವಾ ನಿಷ್ಠತೆಗೆ ಮೆಚ್ಚುಗೆ ವ್ಯಕ್ತಪಡಿಸಿ ಲಕ್ಷ್ಮೀನಾರಾಯಣ ಅವರ ನಿವೃತ್ತ ಜೀವನ ಶುಭವಾಗಿರಲಿ ಎಂದು ಶುಭ ಹಾರೈಸಿದರು.
ಪಟ್ಟಣ ಪಂಚಾಯತ್ ನ ಅಭಿಯಂತರ ಮಹಾವೀರ ಆರಿಗ ಮಾತನಾಡಿ ಪಟ್ಟಣ ಪಂಚಾಯತ್ ನ ವ್ಯಾಪ್ತಿಯ ಮೂಲೆ ಮೂಲೆಯನ್ನು ತಿಳಿದಿರುವ ಕೆಲವೇ ಸಿಬ್ಬಂದಿಗಳಲ್ಲಿ ಲಕ್ಷ್ಮೀನಾರಾಯಣರವರೂ ಒಬ್ಬರು.
ಹಿರಿಯ ಸದಸ್ಯ ಜಗದೀಶ್ ಡಿ., ಇಂಜಿನಿಯರ್ ಮಹಾವೀರ್ ಮಾನತಾಡಿ ನಿವೃತರ ಸೇವಾ ಕಾರ್ಯಗಳ ಬಗ್ಗೆ ತಿಳಿಸಿ ಶುಭ ಹಾರೈಸಿದರು.

ಮುಖ್ಯಾಧಿಕಾರಿ ರಾಜೇಶ್ ಸ್ವಾಗತಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಗೌರಿ, ಸದಸ್ಯರಾದ ಅಂಬರೀಶ್, ತುಳಸಿ, ಜನಾರ್ದನ್ ಕುಲಾಲ್, ಲೋಕೇಶ್ ನಾಯ್ಕ, ನಾಮನಿರ್ದೇಶನ ಸದಸ್ಯರಾದ ಹೆನ್ರಿಲೋಬೋ, ಸತೀಶ್ ಶೆಟ್ಟಿ, ಅಬ್ದುಲ್ ಬಶೀರ್ ಮತ್ತು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.