

ನಾರಾವಿ: ಸಂತ ಅಂತೋನಿ ಪದವಿ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜು ನಾರಾವಿ ಇಲ್ಲಿನ ನೂತನ ಪ್ರಾಂಶುಪಾಲರಾಗಿ ಸಂತೋಷ್ ಫ್ರಾಂಕ್ಲಿನ್ ಸಲ್ಡಾನ ಅಧಿಕಾರ ಸ್ವೀಕರಿಸಿದರು.
ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸ್ವಾ. ಜೆರೋಮ್ ಡಿ’ಸೋಜಾ ಇವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದ ಸಂತೋಷ್ ಸಲ್ಡಾನ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆಂದು ವಾಗ್ದಾನ ನೀಡಿದರು. ಗಣಿತಶಾಸ್ತ್ರದ ಉಪನ್ಯಾಸಕರಾದ ಇವರು ಕಳೆದ ಹನ್ನೆರಡು ವರ್ಷಗಳಿಂದ ಉಪಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು.