


ನಾವೂರು: ಸರಕಾರಿ ಪ್ರೌಢ ಶಾಲಾ ಮಕ್ಕಳ ಮಂತ್ರಿ ಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜು.4ರಂದು ಜರಗಿತು. ಈ ಕಾರ್ಯಕ್ರಮವನ್ನು ನಾವೂರಿನ ಪ್ರಸಿದ್ಧ ವೈದ್ಯ ಡಾ. ಪ್ರದೀಪ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಹೊಸದಾಗಿ ಆಯ್ಕೆಯಾದ ಶಾಲಾ ವಿದ್ಯಾರ್ಥಿಗಳ ನಾಯಕ ವಿಖ್ಯಾತ್ 10ನೇ ತರಗತಿ, ಉಪನಾಯಕ ಮುಹಮ್ಮದ್ ಮುಬಶೀರ್ ಶಾಕ್ಮಲ್ 9ನೇ ತರಗತಿ ಹಾಗೂ ಮಂತ್ರಿ ಮಂಡಲದ ಸರ್ವ ಸದಸ್ಯರು ಪ್ರಮಾಣವಚನವನ್ನು ಸ್ವೀಕರಿಸಿದರು. ಶಾಲಾ ಮುಖ್ಯ ಶಿಕ್ಷಕ ರಾಜೇಂದ್ರ ಎಂ. ಅವರು ಪ್ರತಿಜ್ಞೆಯನ್ನು ಬೋಧಿಸಿದರು.


ಶಾಲೆಯ ಕರ್ತವ್ಯ, ಶಿಸ್ತು ಜವಾಬ್ದಾರಿ ಸರಿಯಾಗಿ ನಿಭಾಯಿಸುದಾಗಿ ಪ್ರತಿಜ್ಞೆ ಮಾಡಿದರು. ಮುಖ್ಯ ಅಥಿತಿಯಾಗಿ ಡಾ. ಪ್ರದೀಪ್ ನಾವೂರು ಭಾಗವಹಿಸಿ ಮಾತನಾಡಿ ಮಕ್ಕಳಲ್ಲಿ ಶಿಸ್ತು ಮತ್ತು ಉತ್ತಮ ನಾಯಕತ್ವ ಮತ್ತು ಪ್ರಾಮಾಣಿಕವಾಗಿ ತಮ್ಮ ತಮ್ಮ ಕರ್ತವ್ಯ ವನ್ನು ನಿರ್ವಸಿಸಲು ವಿದ್ಯಾರ್ಥಿಗಳಿಗೆ ತಿಳಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಉಮೇಶ್ ಪ್ರಭು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಹಾಗೂ ಎಲ್ಲಾ ಶಿಕ್ಷಕ ವೃಂದದವರು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ತನುಶ್ರೀ 9ನೇ ಸ್ವಾಗತಿಸಿದರು. ದೃತಿ 8ನೇ ತರಗತಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಉಪನಾಯಕ ಧನ್ಯವಾದ ನೀಡಿದರು.










