ಕಾಯರ್ತಡ್ಕ: ಗಾಳಿನೋಟ ನಿವಾಸಿ ಪದ್ಮಾವತಿ(60ವ) ಹುಲ್ಲು ಕತ್ತರಿಸುವ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜು. 2ರಂದು ಬೆಳಗ್ಗೆ ನಡೆದಿದೆ.
ಹುಲ್ಲು ಕತ್ತರಿಸುವಾಗ ಕೆರೆಯ ಬದಿಯಲ್ಲಿ ಕಾಲು ಜಾರಿದ ಹಿನ್ನಲೆಯಲ್ಲಿ ಪದ್ಮಾವತಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಮೃತರು ಗಂಡ ದೇವಪ್ಪ ಕುಂಭಾರ, ಮಕ್ಕಳಾದ ರುದ್ರಪ್ಪ, ರುಕ್ಮಯ್ಯರನ್ನು ಅಗಲಿದ್ದಾರೆ.