ಉಜಿರೆ: 2025-26ನೇ ಸಾಲಿನ ಅನುಗ್ರಹ ಪೂರ್ವ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವವು ಶಾಲಾ ಸಭಾಭವನದಲ್ಲಿ ನಡೆಯಿತು. ಪ್ರಾರ್ಥನೆ ಮೂಲಕ ಸಭಾ ಕಾರ್ಯಕ್ರಮವನ್ನು ಶಾಲಾ ಸಂಚಾಲಕ ಫಾ! ಅಬೆಲ್ ಲೋಬೊ, ಪ್ರಾಂಶುಪಾಲ ಫಾ! ವಿಜಯ್ ಲೋಬೊ, ಶಿಕ್ಷಕಿ ಗ್ರೇಸಿ ಸಲ್ತಾನ ಅವರು ಮಕ್ಕಳ ಜೊತೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಸಭಾ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ಒಂದನೇ ತರಗತಿ ಮಕ್ಕಳು ಕೆಲವು ಹಾಡುಗಳನ್ನು ಹಾಡಿದರು. ಪ್ರಾಂಶುಪಾಲರ ಪ್ರಸ್ತಾವಿಕ ಮಾತಿನಲ್ಲಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು. ಹಾಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಸ್ವಲ್ಪ ತಮ್ಮ ಜವಾಬ್ದಾರಿಯನ್ನು ನೋಡುವಂತೆ ಕೇಳಿಕೊಂಡರು. ಅಧ್ಯಕ್ಷತೆಯನ್ನು ವಹಿಸಿದ ಫಾ|ಅಬೆಲ್ ಲೋಬೊ ಅವರು ಶಾಲಾ ಕಾರ್ಯ ಚಟುವಟಿಕೆಗಳಿಗೆ ಶುಭ ಕೋರಿದರು. ಮಕ್ಕಳಿಗೆ ಸಿಹಿ ತಿಂಡಿಗಳನ್ನು ಹಂಚಲಾಯಿತು. ವಿನ್ನಿ ಸ್ವಾಗತಿಸಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಗೀತಾ ವಂದಿಸಿದರು.