ಬೆಳ್ತಂಗಡಿ: ತಾಲೂಕಿನಾದ್ಯಂತ ಅಡಿಕೆ ಎಲೆಚುಕ್ಕೆ ಬಾಧೆ ತೀವ್ರವಾಗಿ, ಅಡಿಕೆ ಬೆಳೆಯ ಉತ್ಪಾದಕತೆ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವೈಜ್ಞಾನಿಕ ಸಮಿತಿ ರಚಿಸಿ ರೈತರಿಗೆ ಸಹಾಯವಾಗುವಂತೆ ಸಹಾಯಧನ ನೀಡಲು ಶಿಫಾರಸ್ಸು ಮಾಡಿದೆ.
ಅದರಂತೆ ರೈತರು ಅಡಿಕೆ ಎಲೆಚುಕ್ಕೆ ರೋಗ ಸಮಗ್ರ ನಿರ್ವಹಣೆಗೆ ಶೇ.30ರ ಸಹಾಯಧನದಂತೆ ರೈತರು ಖರೀದಿ ಮಾಡಿದ ಶಿಲೀಂದ್ರನಾಶಕ/ಪೋಷಕಾಂಶಗಳ ಜಿ ಎಸ್ ಟಿ ನಮೂದು ಹೊಂದಿದ ಮತ್ತು ಎ. 2025ರ ನಂತರ ಖರೀದಿಸಿರುವ ಬಿಲ್ಲುಗಳನ್ನು ಯೋಜನೆಯ ಮಾರ್ಗಸೂಚಿಯಂತೆ ನಿಗದಿಪಡಿಸಿದ ಅರ್ಜಿ ಜೊತೆಗೆ ಬೆಳ್ತಂಗಡಿ ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸಲು ಕೋರಲಾಗಿದೆ.
ಅರ್ಜಿ ಜೊತೆಗೆ ಪಹಣಿ (RTC), ಆಧಾರ್ ಪ್ರತಿ. ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹಾಗೂ ಪರಿಶಿಷ್ಟ ಪಂಗಡ/ ಪರಿಶಿಷ್ಟ ಜಾತಿ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ಎ. 2025ರ ನಂತರ ಖರೀದಿಸಿದ ಜಿ ಎಸ್ ಟಿ ಹೊಂದಿರುವ ಮೂಲ ಬಿಲ್ಲುಗಳನ್ನು ಸಲ್ಲಿಸುವುದು. ವರ್ಗವಾರು, ಅರ್ಜಿಗಳ ಜೇ?ತೆಗನುಗುಣವಾಗಿ ತಾಲೂಕಿಗೆ ಹಂಚಿಕೆಯಾದ ಅನುದಾನದಂತೆ ಸಹಾಯಧನಕ್ಕೆ ಅರ್ಜಿಗಳನ್ನು ಪರಿಗಣಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಅಧಿಕಾರಿ ವರ್ಗದವರನ್ನು ಸಂಪರ್ಕಿಸಲು ಕೋರಿದೆ.
ಬೆಳ್ತಂಗಡಿ ಹೋಬಳಿ : ಮಹಾವೀರ ಶೇಬಣ್ಣವರನೇ
ಮೊಬೈಲ್ ನಂ: 8123921087
ವೇಣೂರು ಹೋಬಳಿ : ಶ್ರೀ ಭೀಮರಾಯ ಸೊಡಗಿ,
ಮೊಬೈಲ್ ನಂ: 9741713598
ಕೊಕ್ಕಡ ಹೋಬಳಿ : ಮಲ್ಲಿನಾಥ ಬಿರಾದಾರ,
ಮೊಬೈಲ್ ನಂ: 9986411477
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು:
ಕೆ.ಎಸ್.ಚಂದ್ರಶೇಖರ್, ಮೊಬೈಲ್ ನಂ: 9448336863