ಲಾಯಿಲ ಗ್ರಾ. ಪಂ. ಅರಿವು ಕೇಂದ್ರದಲ್ಲಿ ಬೇಸಿಗೆ ಶಿಬಿರ

0

ಲಾಯಿಲ: ಮೇ. 20ರಂದು ಲಾಯಿಲ ಗ್ರಾಮ ಪಂಚಾಯತ್‌ ಮತ್ತು ಅರಿವು ಕೇಂದ್ರದಲ್ಲಿ ಏಳನೇ ದಿನದ ಬೇಸಿಗೆ ಶಿಬಿರ ನಡೆಯುವುದರೊಂದಿಗೆ ಬೇಸಿಗೆ ಶಿಬಿರವು ಸಂಪನ್ನಗೊಂಡಿತು.

ಈ ಕಾರ್ಯಕ್ರಮದಲ್ಲಿ ಭವಾನಿ ಶಂಕರ ಎನ್‌. ಮಾನ್ಯ ಕಾರ್ಯ ನಿರ್ವಹಣಾಧಿಕಾರಿಗಳು ತಾಲೂಕು ಪಂಚಾಯತ್ ಬೆಳ್ತಂಗಡಿ, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಉಷಾ ಕಾಮತ್‌ ಆರ್ಥಿಕ ಸಮಾಲೋಚನಕಾರರು ಬೆಳ್ತಂಗಡಿ, ನಾಗವೇಣಿ ಅಂಗನವಾಡಿ ಮೇಲ್ವಿಚಾರಕರು, ಪಂಚಾಯತ್‌ ಸಿಬ್ಬಂದಿಗಳು, ಗುರುಗಳು ಡಯಾಸಿಸ್ ಆಫ್‌ ಬೆಳ್ತಂಗಡಿ, ಅಂಗನವಾಡಿ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಗುತ್ತಿಗೆದಾರರು, ಮಕ್ಕಳು,ಪೋಷಕರು ಉಪಸ್ಥಿತರಿದ್ದರು.

ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಶಿಬಿರಕ್ಕೆ ಆಗಮಿಸಿದ ಎಲ್ಲರಿಗೂ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಸ್ವಾಗತ ನೀಡಿದರು.

ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಸುಪ್ರಿತಾ ಎಸ್‌. ಶೆಟ್ಟಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಅರಿವು ಕೇಂದ್ರದ ಮೇಲ್ವಿಚಾರಕರು ವರದಿ ಮಂಡಿಸಿದರು. ಹಾಗೂ ಮಕ್ಕಳು ಬೇಸಿಗೆ ಶಿಬಿರದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಲಾಯಿತು. ಮಕ್ಕಳಿಗೆ ಶಿಬಿರದ ಪ್ರತಿ ದಿನ ಉಪಹಾರದ ವ್ಯವಸ್ಥೆ ಮಾಡಿದ ದಾನಿಗಳಿಗೆ ಸ್ಮರಣಿಕೆಯನ್ನು ನೀಡುವುದರೊಂದಿಗೆ ಗೌರವಿಸಲಾಯಿತು.

ಮಕ್ಕಳಿಗೆ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿ ಉತ್ತರಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾಹಿತಿ ನೀಡಿದ ಉಷಾ ಕಾಮತ್‌ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮಾನ್ಯ ಕಾರ್ಯನಿರ್ವಹಣಾಧಿಕಾರಿಗಳು ಮಾತಾನಾಡಿ ಮಕ್ಕಳಿಗೆ ಗ್ರಾಮ ಪಂಚಾಯುತ್‌ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಬೇಸಿಗೆ ಶಿಬಿರ ಉತ್ತಮವಾಗಿ ನಡೆದುದರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಅಧ್ಯಕ್ಷರು ಶುಭ ಹಾರೈಸಿದರು. ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಪಂಚಾಯತ್‌ ಸದಸ್ಯ ಗಣೇಶ್‌ ಆರ್‌ ಇವರು ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here