ಶಿಬಾಜೆ: ಗ್ರಾಮದ ಬರ್ಗುಳ ಸಮೀಪದ ಶೀನ ಎಂಬವರ ಮನೆ ಸಮೀಪ ಹರಿಯುತ್ತಿರುವ ಹಳ್ಳದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಪತ್ತಿಮಾರು ನಿವಾಸಿ ಪ್ರಸಾದ್ ಪೂಜಾರಿ ಎಂದು ಮನೆಯವರು ಶವದ ಗುರುತು ಹಿಡಿದ ಬಳಿಕ ತಿಳಿದು ಬಂದಿದೆ.
ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ತಂಡದವರಾದ ಅವಿನಾಶ್ ಭಿಡೆ, ಕಿರಣ್, ಕೃಷ್ಣಪ್ಪ, ಬೇಬಿ ಪೆರ್ಲ, ಸಚಿನ್ ಭಿಡೆ, ರವೀಂದ್ರ ರವರು ಸ್ಥಳಕ್ಕೆ ಆಗಮಿಸಿ ಶವ ಮೇಲೆ ತೆಗೆಯುವ ಕೆಲಸ ಮಾಡಿದ್ಫು ಧರ್ಮಸ್ಥಳ ಠಾಣಾ ಪೊಲೀಸರು ಮಹಜರು ನಡೆಸುತ್ತಿದ್ದಾರೆ.