ಜಲಂದರ್: ಧರ್ಮಸ್ಥಳದ ಬೊಳಿಯಾರ್ ನಿವಾಸಿ, ಏರೋಸ್ಪೇಸ್ ಉದ್ಯೋಗಿ, ಪಂಜಾಬ್ ನ ಜಲಂದರ್ ನಲ್ಲಿರುವ ಕಾಲೇಜಿನಲ್ಲಿ ಅನುಮಾನಾಸ್ಪದವಾಗಿ ಮೇ. 18ರಂದು ಸಾವನ್ನಪ್ಪಿದ್ದು, ಮೇ.20ರಂದು ಮೃತದೇಹ ಜಲಂದರ್ ನಿಂದ ದೆಹಲಿಗೆ ತರಲಾಗಿದೆ.

ಪ್ರಕರಣ ದಾಖಲಿಸುವಲ್ಲಿ ಸ್ಥಳೀಯ ಪೊಲೀಸರು ಆಕಾಂಕ್ಷ ತಂದೆ ಸುರೇಂದ್ರ,ಅಣ್ಣ ಆಕರ್ಷ್ ನೀಡಿದ ದೂರನ್ನು ತಿರುಚಿದ್ದ ಹಿನ್ನಲೆಯಲ್ಲಿ ಎಸ್ ಪಿ ಗೆ ದೂರು ನೀಡಲಾಗಿತ್ತು. ಅಲ್ಲದೇ ಡಿಐಜಿ ನ್ಯಾಯಯುತ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಮೇ 19ರಂದು ಆಕಾಂಕ್ಷರ ಪಾರ್ಥೀವ ಶರೀರದ ಮರಣೋತ್ತರ ಪರೀಕ್ಷೆ ನಡೆದು,ಇಂದು ಮುಂಜಾನೆ 3.30ರ ಸುಮಾರಿಗೆ ಜಲಂದರ್ ಆಸ್ಪತ್ರೆಯಿಂದ ಮೃತದೇಹವನ್ನು ದೆಹಲಿಗೆ ತರಲಾಗಿದೆ.

ಈಗಾಗ್ಲೆ 10.30ಕ್ಕೆ ಮೃತದೇಹ ದೆಹಲಿ ತಲುಪಿದ್ದು, ರಾತ್ರಿ 8ಗಂಟೆಗೆ ದೆಹಲಿಯಿಂದ ಬೆಂಗಳೂರಿಗೆ ಸ್ಪೈಸ್ ಜೆಟ್ ವಿಮಾನದಲ್ಲಿ ತರಲಾಗುತ್ತದೆ. ತಡರಾತ್ರಿ ಬೆಂಗಳೂರಿನಿಂದ ಆಂಬ್ಯುಲೆನ್ಸ್ ನಲ್ಲಿ ಮೃತದೇಹವನ್ನು ತವರಿಗೆ ತರಲಾಗುವುದು. ನಾಳೆ ಬೆಳಗ್ಗೆ ಆಕಾಂಕ್ಷಳ ಅಂತ್ಯ ಸಂಸ್ಕಾರ ನಡೆಯಲಿದೆ.
ಆರೋಪಿ ಬಿಜಿಲ್ ಮ್ಯಾಥ್ಯೂ ಬಂಧನ
ಆಕಾಂಕ್ಷಳ ಸಾವಿಗೆ ಕಾರಣ ಎಂಬ ಆರೋಪ ಎದುರಿಸುತ್ತಿರುವ ಲವ್ಲಿ ಪ್ರೊಫೆಷನಲ್ಸ್ ಯುನಿವರ್ಸಿಟಿಯ ಪ್ರಾದ್ಯಾಪಕ ಬಿಜಿಲ್ ಮ್ಯಾಥ್ಯೂವನ್ನು ಪೊಲೀಸರು ಸೋಮವಾರ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.