ಬೆಳ್ತಂಗಡಿ: ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಏರ್ ಕ್ರಾಫ್ಟ್ ಮೈನ್ಟೈನೆನ್ಸ್ ಇಂಜಿನಿಯರಿಂಗ್ ನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಹತ್ತ್ವದ ಸಾಧನೆ ಮಾಡಿದ್ದಾರೆ.
ಪರೀಕ್ಷೆ ಬರೆದ ವಿದ್ಯಾರ್ಥಿಗಳಾದ ಧ್ರುವ ಅನೂಪ್, ಮನ್ವಿತ್ ಎಂ.ಬಿ., ಗೌತಮ್ ಎಸ್., ಇಂಚರಾ ಟಿ.ಆರ್., ನೇಹನ್ ಯು, ವರ್ಷಿತಾ ಎಲ್.ಬಿ., ರೋಹಿತ್ ಎಂ., ಶ್ರೀ ಲಕ್ಷ್ಮೀ ಅವರು ರ್ಯಾಂಕ್ ಪಡೆದುಕೊಂಡು, ರಾಷ್ಟ್ರಮಟ್ಟದ ಸ್ಕಾಲರ್ ಶಿಪ್ ಗೆ ಅರ್ಹರಾಗಿದ್ದಾರೆ. ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.