ಲಾಯಿಲ ಗ್ರಾ.ಪಂ. ಹಾಗೂ ಅರಿವು ಕೇಂದ್ರ ವತಿಯಿಂದ ಬೇಸಿಗೆ ಶಿಬಿರ

0

ಲಾಯಿಲ: ಗ್ರಾಮ ಪಂಚಾಯತ್ ಹಾಗೂ ಅರಿವು ಕೇಂದ್ರ ಇದರ ಸಹಯೋಗದೊಂದಿಗೆ ಮೇ. 14ರಂದು ಗ್ರಾಮ ಪಂಚಾಯತ್ ಭಾರತ್ ಮಾತಾ ಸಭಾಭವನದಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ಪಂ. ಅಧ್ಯಕ್ಷೆ ಜಯಂತಿ ಎಮ್. ಕೆ. ಇವರು ಮಕ್ಕಳೊಂದಿಗೆ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಗಂಧಿ ಜಗನ್ನಾಥ, ಸದಸ್ಯರಾದ ಅರವಿಂದ ಕುಮಾರ್, ಜಯಂತಿ, ರಜನಿ ಎಂ. ಆರ್., ಕಾರ್ಯದರ್ಶಿ ತಾರಾನಾಥ ನಾಯ್ಕ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸುಪ್ರಿತಾ ಎಸ್. ಶೆಟ್ಟಿ, ಪಂಚಾಯತ್ ಸಿಬ್ಬಂದಿಗಳು ಹಾಗೂ ಮಕ್ಕಳು, ಪೋಷಕರು ಉಪಸ್ಥಿತರಿದ್ದರು.

ಕಾರ್ಯದರ್ಶಿಗಳಾದ ತಾರಾನಾಥ ನಾಯ್ಕ ಇವರು ಮಕ್ಕಳನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿ ಹೇಳಿದರು. ಹಾಗೂ ಅಧ್ಯಕ್ಷರು ಮಕ್ಕಳಿಗೆ ಶುಭ ಹಾರೈಸಿದರು. ಗ್ರಂಥಾಲಯ ಮೇಲ್ವಿಚಾರಕಿ ಹರ್ಷಿತಾ ಇವರು ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಏರ್ಪಡಿಸಿದರು. ಈ ಶಿಬಿರವು ಮೇ. 14ರಿಂದ 20ರವರೆಗೆ ನಡೆಯಲಿರುವುದು. ಕಾರ್ಯಕ್ರಮವನ್ನು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸುಪ್ರೀತಾ ಎಸ್. ಶೆಟ್ಟಿ ಇವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here