ಪುಂಜಾಲಕಟ್ಟೆ: ಮಾಲಾಡಿ ಗ್ರಾಮದ ಕೊಲ್ಪೆದಬೈಲು ನಿವಾಸಿ ವಸಂತಿ ಹೆಗ್ಡೆ ಇವರ ಮನೆಯಿಂದ ಯಾರು ಇಲ್ಲದ ವೇಳೆ ಏ.20ರಂದು ಮನೆಯ ಮುಂದಿನ ಬಾಗಿಲಿಗೆ ಹಾಕಿರುವ ಬೀಗದ ಕೊಂಡಿಯನ್ನು ಮುರಿದು ಮನೆಯೊಳಗೆ ಪ್ರವೇಶಿಸಿ ಕೋಣೆಯ ಕಪಾಟಿನಿಂದ ಸುಮಾರು 13,72,000 ಮೌಲ್ಯದ 160.5 ಗ್ರಾಂ ತೂಕದ ಚಿನ್ನ ಹಾಗೂ 30,000 ನಗದು ದೋಚಿರುತ್ತಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಂಜಾಲಕಟ್ಟೆ ಪೋಲಿಸ್ ಠಾಣೆಯಲ್ಲಿ ಕಲಂ: 331(3), 305 BNS- 2023 ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲೂರು ತಾಲೂಕು ಹಾಸನ ಜಿಲ್ಲೆಯ ಶಿವರಾಜ್(32), ಕಣ್ಣೂರು ಗ್ರಾಮದ ಮಂಗಳೂರು ತಾಲೂಕಿನ ಸಂತೋಷ್( 26) ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಬಂಧಿಸಿ 106 ಗ್ರಾಂ ತೂಕದ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಪ್ರಕಣದ ಪತ್ತೆ ಹಚ್ಚುವಲ್ಲಿ ಪೊಲೀಸ್ ಅಧೀಕ್ಷಕರು ದ.ಕ. ಜಿಲ್ಲೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ. ಜಿಲ್ಲೆ ಮತ್ತು ಪೊಲೀಸ್ ಉಪಾಧಿಕ್ಷಕರು ಬಂಟ್ವಾಳರವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಪುಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್ಐ ನಂದಕುಮಾರ್ ಎಂ. ಎಂ., ಓಮನ ಎನ್. ಕೆ., ಸಿಬ್ಬಂದಿಗಳಾದ ಸಂದೀಪ್, ರಾಹುಲ್ ರಾವ್, ಮೋಹನ್, ರಜಿತ್, ವೇಣೂರು ಠಾಣಾ ಸಿಬ್ಬಂದಿ ಅಬ್ದುಲ್ ಲತೀಫ್, ಬೆಳ್ತಂಗಡಿ ವೃತ್ತ ಕಛೇರಿಯ ಸಿಬ್ಬಂದಿ ವಿಜಯ್ ಕುಮಾರ್ ರೈ, ಬಂಟ್ವಾಳ ಪೊಲೀಸ್ ಉಪಾಧೀಕ್ಷಕರ ಕಛೇರಿಯ ಸಿಬ್ಬಂದಿಯವರಾದ ವಿವೇಕ್, ಕುಮಾರ್, ಜಿಲ್ಲಾ ಗಣಕ ಯಂತ್ರ ವಿಭಾಗದ ಸಿಬ್ಬಂದಿಯವರಾದ ಸಂಪತ್, ದಿವಾಕರ್, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಛೇರಿ ಸಿಬ್ಬಂದಿ ಪ್ರವೀಣ ಮತ್ತು ಜಿಲ್ಲಾ ಬೆರಳಚ್ಚು ಘಟಕದ ಪೊಲೀಸ್ ನಿರೀಕ್ಷಕ ಸೋಮಶೇಖರ್ ಮತ್ತು ಅವರ ಸಿಬ್ಬಂದಿಯವರು ಹಾಗೂ ಠಾಣಾ ಚಾಲಕ ಕುಮಾರ್ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.