
ಶಿಶಿಲ: ಹನುಮಂತ ಸ್ವಾಮಿ ಭಕ್ತಿಗೆ ಆದರ್ಶ, ಆತ ಅತೀ ದೈರ್ಯವಂತ. ಯಾವುದೆ ಕಾರ್ಯ ಸಾಧಿಸಬೆಕಾದಲ್ಲಿ ಅದನ್ನು ಸಾಧಿಸುವಂತ ಪರಾಕ್ರಮಿ, ಶ್ರೀರಾಮನ ಸೇವಕ, ದುಷ್ಟ ಶಕ್ತಿಗಳನ್ನು ನಿಗ್ರಹಿಸಿದ ವೀರ ಪುರುಷ, ಆತನ ಆರಾಧನೆ ಪರಿಣಾಮ ನಮಗೂ ರಾಷ್ಟ್ರಕ್ಕೂ ಶಕ್ತಿ ತುಂಬಲಿ. ಎಂದು ಶ್ರೀ ಅರಿಕೆಗುಡ್ದೆ ವನದುರ್ಗಾ ದೇವಾಲಯ ಅಧ್ಯಕ್ಷ ಪ್ರಕಾಶ ಪಿಲಿಕಬೆ ತಿಳಿಸಿದರು.
ಶಿಶಿಲ ಶಿವಕೀರ್ತಿ ನಿಲಯದಲ್ಲಿ ನಡೆದ ಶ್ರೀ ಆಂಜನೇಯ ಜಯಂತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಜೀವ ವಿಮಾ ಬೆಳ್ತಂಗಡಿ ಅಧಿಕಾರಿ ಉದಯಶಂಕರ ಅರಸಿನಮಕ್ಕಿ ಮಾತಾಡಿ ಹನುಮನ ಶಕ್ತಿ ಎಲ್ಲಾ ಭಾರತೀಯ ಪ್ರಜೆಗೂ ಬರಲಿ. ಅವನ ಆದರ್ಶ ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಕಾಸರಗೋಡು ಹಿರಿಯ ಭಜನಾ ಪಟು ಹರಿದಾಸ ಜಯಾನಂದ ಕಾಸರಗೋಡು ಮತ್ತು ಭಜನಾ ಸಾಧಕ ಬಾಲಕೃಷ್ಣ ಪಂಜ ಅವರನ್ನು ಮನೆಯ ಪರವಾಗಿ ಶ್ರೀ ಜಯರಾಮ ನೆಲ್ಲಿತ್ತಾಯ ಮತ್ತು ರೇಖಾ ಜಯರಾಮ ನೆಲ್ಲಿತ್ತಾಯ ಅಭಿನಂದಿಸಿದರು.
ರಾಘವೇಂದ್ರ ಕಿಗ್ಗ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಯ ಭಜಕರು ಭಾಗವಹಿಸಿ ಆಕರ್ಷಕ ಕುಣಿತ ಭಜನೆ ನೆರವೆರಿಸಿದರು. ಬಿಳಿನೆಲೆ ಭಜನಾ ಮಂಡಳಿಯ ಸುಂದರ ಮತ್ತು ತಂಡದವರಿಂದ ಮತ್ತು ಹರಿದಾಸ ಕಾಸರಗೋಡು ಜಯಾನಂದ ಅವರ ತಂಡ ಭಜನಾ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ಕಾರ್ಯಕ್ರಮದಲ್ಲಿ ಬೆಳ್ತಂಗಡಿ, ಪುತ್ತೂರು, ಕಾಸರಗೋಡು ವಿವಿಧ ಭಜನಾ ತಂಡದವರು ಭಾಗವಹಿಸಿದ್ದು ಎಲ್ಲರಿಗೂ ಶಿವಕೀರ್ತಿ ನಿಲಯದ ಜಯರಾಮ ನೆಲ್ಲಿತ್ತಾಯ ದಂಪತಿಗಳು ಮನೆಯವರೂ ಎಲ್ಲರೂ ಅಭಿನಂದನೆ ತಿಳಿಸಿದ್ದರು.