ಹೋಲಿ ರೆಡಿಮರ್ ಚರ್ಚ್ ನಲ್ಲಿ ಪವಿತ್ರ ಗುರುವಾರ, ಶುಭ ಶುಕ್ರವಾರ ಹಾಗೂ ಈಸ್ಟರ್ ಹಬ್ಬದ ಆಚರಣೆ

0

ಬೆಳ್ತಂಗಡಿ: ಹೋಲಿ ರೆಡಿಮರ್ ಚರ್ಚ್ ನಲ್ಲಿ ತಪಸ್ಸು ಕಾಲದ ಅಂತ್ಯ ದಲ್ಲಿ ಕ್ರೈಸ್ತರು ಆಚರಿಸುವ ಮೂರು ದಿನಗಳ ಪವಿತ್ರ ಆಚರಣೆಯನ್ನು ಅತ್ಯoತ ಶೃದ್ದಾ ಭಕ್ತಿಯಿಂದ ಆಚರಿಸಲಾಯಿತು.

ಪವಿತ್ರ ಗುರುವಾರ: ಈ ದಿನವನ್ನು ಯೇಸು ಕ್ರಿಸ್ತನ ಪವಿತ್ರ ಪೌರೋಹಿತ್ಯವನ್ನು ನೆನಪಿಸುವ ತನ್ನ ಶಿಷ್ಯರೊಂದಿಗೆ ಕಡೆಯ ಭೋಜನ ಹಾಗೂ ಯೇಸುವಿನ ಶಿಷ್ಯರನ್ನು ಪ್ರತಿನಿಧಿಸುವ 12 ಭಕ್ತರ ಪಾದಗಳನ್ನು ಗುರುಗಳು ತೊಳೆದು ಸಾಂಕೇತಿಕವಾಗಿ ಯೇಸುವಿನ ಕರೆಯಂತೆ ನಾನು ನಿನಗೆ ಮಾಡಿದಂತೆ ನೀನು ಕೂಡ ಇತರರ ಕಷ್ಟದಲ್ಲಿ ಭಾಗಿಯಾಗಲು ಈ ಆಚರಣೆ ಸೂಚಿಸುತದೆ. ಈ ದಿನವನ್ನು ಧರ್ಮ ಸಭೆಯ ಎಲ್ಲಾ ಧರ್ಮ ಗುರುಗಳ ದಿನವನ್ನಾಗಿ ಕೂಡ ಆಚರಿಸಲಾಗುತದೆ. ನಮ್ಮ ಚರ್ಚಿನ ಪ್ರಧಾನ ಧರ್ಮ ಗುರು ಫಾ. ವಾಲ್ಟರ್ ಡಿ’ಮೆಲ್ಲೊ ಹಾಗೂ ಫಾ. ಕ್ಲಿಫರ್ಡ್ ಪಿಂಟೊರವರನ್ನು ಸನ್ಮಾನಿಸಲಾಯಿತು.

ಶುಭ ಶುಕ್ರವಾರ: ಈ ದಿನವು ಎಲ್ಲಾ ಕ್ರೈಸ್ತ ಭಾಂಧವರಿಗೆ ಪವಿತ್ರ ದಿನ. ನಮ್ಮ ದೇವಾಲಯದಲ್ಲಿ ಬೆಳಿಗ್ಗೆ 7:30 ಘಂಟೆಗೆ ಶಿಲುಬೆಯ ಹಾದಿಯನ್ನು ನಡೆಸಿ ಈ ದಿನವನ್ನು ಪ್ರಾರಂಭಿಸಲಾಯಿತಿ. ಭಕ್ತರು ಇಡಿ ದಿನ ಉಪವಾಸ ನಿಂತು ಸಂಜೆ ನಡೆದ ಯೇಸುವಿನ ಶಿಲುಬೆಯ ಮರಣದ ಪವಿತ್ರ ಆಚರಣೆಯಲ್ಲಿ ಅತ್ಯoತ ಶೃದ್ದಾ ಭಕ್ತಿಯಿಂದ ಭಾಗವಹಿಸಿದರು.

ಈಸ್ಟರ್ ಹಬ್ಬ: ಯೇಸುವಿನ ಮರಣದ ಮೂರನೆ ದಿನವನ್ನು ಪುನಾರುತ್ಥಾನ ದಿನ ಈಸ್ಟರ್ ಹಬ್ಬವಾಗಿ ಆಚರಿಸಲಾಗುತದೆ. ಈ ದಿನ ನಮ್ಮ ದೇವಾಲಯಲ್ಲಿ ಸಂಜೆ 7 ಘಂಟೆಗೆ ಹೊಸ ಬೆಂಕಿಯನ್ನು ಆಶಿರ್ವಾದಿಸಿ ಅದರಿಂದ ಪಾಸ್ಕಾ ಹಬ್ಬದ ಮೇಣದ ಬತ್ತಿಯನ್ನು ಉರಿಸಿ ದೇವಾಲಯ ಪ್ರವೀಸಿಸಲಾಯಿತು. ತದನಂತರ ಸಂಭ್ರಮದ ಪವಿತ್ರ ಬಲಿಪೂಜೆ ನಡೆಯಿತು. ಬಲಿಪೂಜೆಯ ಸಮಯದಲ್ಲಿ ನೀರನ್ನು ಆಶಿರ್ವಾದಿಸಿ ಭಕ್ತರಿಗೆ ಸಿಂಪಡಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಬಲಿಪೂಜೆಯ ನಂತರ ನಮ್ಮ ಚರ್ಚಿನ ಪ್ರಧಾನ ಗುರುಗಳಾದ ಫಾ. ವಾಲ್ಟರ್ ಡಿ’ಮೆಲ್ಲೊ ರವರ ಗುರು ದೀಕ್ಷೆಯ 42ನೇ ವರ್ಷದ ವಾರ್ಷಿಕ ದಿನವನ್ನು ಶಾಲು, ಫಲ, ಪುಷ್ಪ ಹಾಗೂ ಹೂ ಗುಚ್ಛ ನೀಡಿ ಗೌರವಿಸಲಾಯಿತು.

ಸಂಭ್ರಮದ ಬಲಿಪೂಜೆಗೆ ಪ್ರಧಾನ ಗುರುಗಳಾಗಿ ಫಾ. ವಾಲ್ಟರ್ ಡಿ’ ಮೆಲ್ಲೊ ಹಾಗೂ ಸಹ ಗುರುಗಳಾಗಿ ಫಾ. ಕ್ಲಿಫರ್ಡ್ ಪಿಂಟೊ, ಫಾ. ಜೋನ್ ಪಿಂಟೊ, ಫಾ. ಅಜೇಯ್ ಹಾಗು ಫಾ. ಆಶಿತ್ ರವರು ಭಾಗವಹಿಸಿದ್ದರು. ಈ ಎಲ್ಲಾ ಮೂರು ದಿನಗಳ ಕಾರ್ಯಕ್ರಮಗಳ ನಿರ್ವಹಣೆಯನ್ನು ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೊ, ಸಂಯೋಜಕಿ ಪೌಲಿನ್ ರೇಗೊ, 18 ವಾಳೆಯ ಗುರಿಕಾರರು ಹಾಗು ಚರ್ಚಿನ ಭಕ್ತ ವೃಂದ ಸಹಕರಿಸಿದರು.

LEAVE A REPLY

Please enter your comment!
Please enter your name here