
ಮೂಡುಬಿದಿರೆ: ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಜೆ.ಇ.ಇ (ಮೈನ್) 2025 ಅರ್ಹತಾ ಪರೀಕ್ಷೆಯ ಎರಡನೆಯ ಹಂತದ ಫಲಿತಾಂಶ ಪ್ರಕಟಗೊಂಡಿದ್ದು, ನ್ಯೂ ವೈಬ್ರೆಂಟ್ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಅಪ್ರತಿಮ ಸಾಧನೆ ಮಾಡುವ ಮೂಲಕ ಸರ್ವಶ್ರೇಷ್ಠ ಫಲಿತಾಂಶವನ್ನು ತಂದಿದ್ದಾರೆ.
ವಿದ್ಯಾರ್ಥಿಯಾದ ಸಮೃದ್ಧ್ ಎಸ್. ಕುಂದರಗಿ (99.7907201), ಅಬ್ದುಲ್ ಜಬ್ಬರ್ (99.7273445), ಯಶವಂತ ಬಿ. (99.7029687), ಸುದೇಶ್ ದತ್ತಾತ್ರೇಯ ಕಿಲ್ಲೇದಾರ್ (99.6188687), ನೂತನ ಆರ್. ಗೌಡ (99.5900000), ಮಹದೇವ್ ಎಲ್ (99.5331093), ಗಣೇಶ್ (99.5062198), ಮಿಲಿಂದ್ ವಿನಯಕ್ ಶೇಟ್ (99.4455672), ಸೋಮನಗೌಡ ಅಸ್ಕಿ (99.4039179), ಪುಷ್ಪಕ್ ಎ. ಆರ್. (99.2862052), ಉಜ್ವಲ್ ಬಲ್ಲಾಳ್(99.2104647), ಶಶಾಂಕ್ (99.0438001). ವಿದ್ಯಾರ್ಥಿಗಳು ವಿಷಯವಾರು ಫಲಿತಾಂಶ ದೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ.
ನ್ಯೂ ವೈಬ್ರೆಂಟ್ ಪಿ.ಯು. ಕಾಲೇಜು ವಿಜ್ಞಾನ ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಅತ್ಯುತ್ತಮ ಪೂರಕ ತರಬೇತಿಯನ್ನು ನೀಡುತ್ತಿದೆ ಎಂಬುವುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ. ಸಂಸ್ಥೆಯು ಆರಂಭದ ವರ್ಷದಿಂದಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಫಲಿತಾಂಶ ಗಳಿಸುವ ಮೂಲಕ ಉತ್ತಮ ಶಿಕ್ಷಣವನ್ನು ನೀಡುತ್ತಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ನಿರ್ದೇಶಕರುಗಳು, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.