

ಮೊಗ್ರು: ಗ್ರಾಮದ ಮುಗೇರಡ್ಕ – ಅಲೆಕ್ಕಿ ಶ್ರೀ ರಾಮ ಸೇವಾ ಟ್ರಸ್ಟ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪದ್ಮುಂಜ ಇದರ ಸಹಯೋಗದೊಂದಿಗೆ ಶ್ರೀರಾಮ ಶಿಶುಮಂದಿರದ ಆವರಣದಲ್ಲಿ, ಏ. 13ರಿಂದ 17ರವರೆಗೆ ಆಯೋಜಿಸಲಾಗಿದ್ದ 5 ದಿನಗಳ ಚಿಣ್ಣರ ಚಿಲಿಪಿಲಿ – 2025 ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಏ. 17ರಂದು ಶಿಶುಮಂದಿರದಲ್ಲಿ ನಡೆಯಿತು. ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಉದಯ ಭಟ್ ಕೊಳಬ್ಬೆ ಇವರು ಸಭಾಧ್ಯಕ್ಷತೆ ವಹಿಸಿದ್ದರು. ಅಲೆಕ್ಕಿ ಶ್ರೀರಾಮ ಸೇವಾ ಟ್ರಸ್ಟ್ ಇದರ ಅಧ್ಯಕ್ಷ ರಮೇಶ್ ಎನ್., ಸಂಚಾಲಕ ಅಶೋಕ್ ಎನ್. ಉಪಸ್ಥಿತರಿದ್ದರು.

ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ನವೀನ್, ರಮೇಶ್, ಲಿಂಗಪ್ಪ, ಮಾಲಿನಿ, ವಿದ್ಯಾ ಕುಮಾರಿ, ಸ್ಪೂರ್ತಿ, ದಿಶಾ, ಸರೋಜಿನಿ ಉಪಸ್ಥಿತರಿದ್ದರು. ಗುರುವರ್ಯರಿಗೆ ಶ್ರೀರಾಮ ಸೇವಾ ಟ್ರಸ್ಟ್ ನ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. 65 ಚಿಣ್ಣರು ಪಾಲ್ಗೊoಡಿದ್ದ ಈ ಶಿಬಿರದಲ್ಲಿ ಸ್ಪೂರ್ತಿ ಯಕ್ಷಿಣಿ ಮಾಯಾ ಲೋಕದ ರಾಜ ಮಕ್ಕಳನ್ನು ಜಾದು ಲೋಕಕ್ಕೆ ಕೊಂಡೊಯ್ದು ರಂಜಿಸಿದರು.
ಶ್ರೀರಾಮ ಶಿಶು ಮಂದಿರದ ಮಾತೆಯರು ಉಪಸ್ಥಿತರಿದ್ದರು. ಅದಿತಿ ಪುರುಷೋತ್ತಮ ಗೌಡ ಪದ್ಮುಂಜ ಇವರು ಯೋಗದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ಅದಿತಿ ಪುರುಷೋತ್ತಮ ಗೌಡ ಪದ್ಮುಂಜರವರಿಗೆ ಸನ್ಮಾನ ಮಾಡಲಾಯಿತು. ಅವರು ಯೋಗಾಸನಗಳನ್ನು ಮಾಡಿ ಮಕ್ಕಳಿಗೆ ಉತ್ತೇಜನ ತುಂಬಿದರು. ಶಿಬಿರದಲ್ಲಿ ಪೇಪರ್ ಕ್ರಾಫ್ಟ್, ಗೂಡುದೀಪ ತಯಾರಿ, ಕಸದಿಂದ ರಸ, ಬಾಟಲ್ ಪೇಂಟಿಂಗ್, ನೃತ್ಯ ತರಬೇತಿ, ಚಿತ್ರಕಲೆ, ವ್ಯಕ್ತಿತ್ವ ವಿಕಸನ, ಮೋಜಿನ ಆಟಗಳು, ಕುಣಿತ ಭಜನೆ, ಚಿಕ್ಕ ಪ್ರವಾಸ, ಬರವಣಿಗೆ ಅಭ್ಯಾಸ,ಏರೋಬಿಕ್ಸ್, ಯೋಗ, ಮಣ್ಣಿನ ಕರಕುಶಲ ತರಬೇತಿ ನಡೆಯಿತು.
ರತ್ನಾವತಿ ಪ್ರಾರ್ಥನೆ ಸಲ್ಲಿಸಿ, ಪುಷ್ಪಲತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.