

ಉಜಿರೆ: ನೀವು ಮಾಡುವ ಉದ್ಯಮದಲ್ಲಿ ಅದನ್ನು ನಡೆಸುವಾಗ ಎಲ್ಲ ರೀತಿಯಲ್ಲಿ ಸಮತೋಲನ ಕಾಯ್ದುಕೊಂಡು ಮುಂದುವರೆಯಬೇಕು. ಜೊತೆಯಲ್ಲಿ ಇತರರು ನಿಮಗೆ ಸ್ಪೂರ್ತಿದಾಯಕವಾದ ಪ್ರೋತ್ಸಾಹ ನೀಡುತ್ತಾ ಇದ್ದರೆ ಹಾಗೂ ನಿಮ್ಮ ಪ್ರಯತ್ನ ಕೂಡಿಕೊಂಡರೆ ಖಂಡಿತವಾಗಿ ನೀವು ಯಶಸ್ವಿಯಾಗಿ ಉದ್ಯಮ ನಡೆಸಬಹುದು. ಇದಕ್ಕೆ ಪೂರಕವಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ದೂರದೃಷ್ಟಿ ಈ ರುಡ್ ಸೆಟ್ ಸಂಸ್ಥೆಯು ನಿಮಗೆ ನಿರಂತರವಾಗಿ ನಿಮ್ಮ ಹಿಂದೆ ಇದ್ದು ಮಾಹಿತಿ-ಮಾರ್ಗದರ್ಶನ ನೀಡುತ್ತದೆ. ಇಡೀ ದೇಶದಲ್ಲಿ ರುಡ್ ಸೆಟ್ ಸಂಸ್ಥೆಯ ಮೂಲಕ ತರಬೇತಿ ಪಡೆದ ಕೋಟ್ಯಂತರ ಯುವ ಜನರು ಯಶ್ವಸಿಯಾಗಿ ಉದ್ಯಮಶೀಲರಾಗಿದ್ದಾರೆ. ಇದು ಗ್ರಾಮೀಣ ಭಾಗ ಮಹಿಳೆಯರಿಗೆ ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಅಭಿಪ್ರಾಯಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 6 ದಿನಗಳ ಕಾಲ ನಡೆದೆ ಉದ್ಯಮಶೀಲತಾ ಅಭಿವೃದ್ಧಿ- ಮದುಮಗಳ ಶೃಂಗಾರ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ, ಹೇಮಾವತಿ ಹೆಗ್ಗಡೆಯವರ ಆಶಯದಂತೆ ನಡೆದ ಈ ತರಬೇತಿ ನಿಮಗೆ ಹೆಚ್ಚು ಉಪಯೋಗವಾಗಲಿ ಎಂದು ಶುಭ ಹಾರೈಸಿದರು.
ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಅವರು ತರಬೇತಿಯ ಹಿನ್ನೋಟ ನೀಡಿ, ಸ್ವಾಗತಿಸಿದರು. ಶಿಭಿರಾರ್ಥಿ ಸೌಮ್ಯ, ನೇಹಾ, ಚೇತನಾ, ಚೈತ್ರ ಪ್ರಾರ್ಥನೆ ನೇರವೇರಿಸಿದರು. ಸೌಮ್ಯಲತಾ, ಸುನೀತ, ಸಮೀನಾ ತರಬೇತಿಯ ಅನುಭವ ಹಂಚಿಕೊಂಡರು. ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.