

ಬೆಳ್ತಂಗಡಿ: ಗರ್ಡಾಡಿ ಗ್ರಾಮದ ನಂದಿಬೆಟ್ಟದಲ್ಲಿ ಏ.14ರಂದು ಸುಮಾರು 70 ವರ್ಷ ಪ್ರಾಯದ ಅಜ್ಜಿ ಪತ್ತೆಯಾಗಿರುವ ಸುದ್ದಿ ವ್ಯಾಪಕವಾಗಿ ಹರಡಿತ್ತು. ನಂದಿಬೆಟ್ಟದ ಗ್ರಾಮಸ್ಥರೊಬ್ಬರ ಮನೆಗೆ ಬಂದಿದ್ದ ಅಜ್ಜಿಗೆ ಹೆಸರು, ವಿಳಾಸ ಯಾವುದೂ ನೆನಪಿರಲಿಲ್ಲ. ಕೊನೆಗೆ ಗ್ರಾಮಸ್ಥರು ಅಜ್ಜಿಯ ಜೊತೆ ಸಮಧಾನದಿಂದ ಮಾತನಾಡಿ ಅವರ ಹೆಸರು ಹಾಗೂ ಊರಿನ ಮಾಹಿತಿ ಪಡೆದು ಕೊಂಡಿದ್ದಾರೆ. ಕಮಲ ಆಚಾರಿ ಎಂಬ ಅಜ್ಜಿ ಬೆಳ್ತಂಗಡಿಯ ಸೋಣಂದೂರಿನವರು ಎಂದು ತಿಳಿದು ಬಂದಿದ್ದು, ಅಜ್ಜಿಯ ಮನೆ ಮಂದಿ ಬಂದು ಕರೆದುಕೊಂಡು ಹೋಗಿದ್ದಾರೆ.
ಕಮಲ ಅವರು ಈ ಹಿಂದೆಯೂ ಇದೇ ರೀತಿ ಮನೆ ಬಿಟ್ಟು ಹೋಗಿದ್ದರು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.