

ಬೆಳ್ತಂಗಡಿ: ಧಾರ್ಮಿಕ, ಜಾತಿಯ, ಸಮುದಾಯದ ಅಥವಾ ಇತರ ಕಾರಣಕ್ಕಾಗಿ ದ್ವೇಷ ಭಾವನೆ, ವೈ ಮನಸ್ಸು ಉಂಟಾಗುವ ರೀತಿ ಮಹಾ ಎಕ್ಸ್‌ಪ್ರೆಸ್ ವೆಬ್‌ಸೈಟ್‌ನಲ್ಲಿ ಸುಳ್ಳು ವರದಿ ಪ್ರಕಟಿಸಿದ ವಿಚಾರಕ್ಕೆ ಸಂಬಂಧಿಸಿ ಪತ್ರಕರ್ತನ ಸೋಗಿನಲ್ಲಿರುವ ರೌಡಿ ಶೀಟರ್, ಬ್ಲ್ಯಾಕ್‌ಮೇಲರ್ ಪ್ರತೀಕ್ ಕೋಟ್ಯಾನ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 353(೨)ರಡಿ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿದ್ದಾರೆ. ಎ.ಎಸ್.ಐ. ಕುಶಾಲಪ್ಪ ನಾಯ್ಕ ಅವರ ದೂರಿನಂತೆ ಪ್ರಕರಣ ದಾಖಲಾಗಿದೆ.
ಪ್ರತೀಕ್ ವಿರುದ್ಧ ದೂರು ದಾಖಲು: ಎ.7ರಂದು ಮಹಾ ಎಕ್ಸ್‌ಪ್ರೆಸ್ ವೆಬ್‌ಸೈಟ್ ನ್ಯೂಸ್ ಎಂಬ ಸಾಮಾಜಿಕ ಮಾಧ್ಯಮದಲ್ಲಿ ವಿದ್ಯುನ್ಮಾನ ಸಾಧನದ ಮೂಲಕ ಪ್ರಚೋದನೆಯಿಂದ ಕೂಡಿದ ಸುಳ್ಳು ಮಾಹಿತಿಯನ್ನು ಪ್ರಕಟಿಸಿ ಧಾರ್ಮಿಕ, ಜಾತಿಯ ಅಥವಾ ಸಮುದಾಯಿಕ ಅಥವಾ ಇತರ ಕಾರಣಕ್ಕಾಗಿ ದ್ವೇಷ ಭಾವನೆ, ಜಾತಿ ಅಥವಾ ಸಮುದಾಯಗಳ ನಡುವೆ ವೈಮನಸ್ಸು ಉಂಟಾಗುವ ರೀತಿಯಲ್ಲಿ ಸುಳ್ಳು ಮಾಹಿತಿಯನ್ನು ಪ್ರಕಟಿಸಿದ ವೆಬ್‌ಸೈಟ್ ರಿಪೋರ್ಟರ್ ಪ್ರತೀಕ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಶಾಲಪ್ಪ ನಾಯ್ಕ ಅವರು ಪೊಲೀಸ್ ಠಾಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ಎ.7ರಂದು ಸಂಜೆ ನಾನು ಸೋಶಿಯಲ್ ಮೀಡಿಯಾದ ಮಾನಿಟರಿಂಗ್ ಸೆಲ್‌ನಲ್ಲಿ ಮೆಸೇಜುಗಳನ್ನು ಪರಿಶೀಲಿಸುತ್ತಿದ್ದಾಗ ಮಹಾ ಎಕ್ಸ್‌ಪ್ರೆಸ್ ವೆಬ್‌ಸೈಟ್ ನ್ಯೂಸ್ ಸಾಮಾಜಿಕ ಮಾಧ್ಯಮದಲ್ಲಿ ಪೊಲೀಸ್ ಭದ್ರತೆ ಬಗ್ಗೆ ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗೆ ಮುತ್ತಿಕ್ಕಿದ ಯುವಕ ಕಿಸ್ ಕೊಟ್ಟವನನ್ನು ಹುಡುಕಾಡುತ್ತಿರುವ ಪೊಲೀಸರು ಎಂಬುದಾಗಿ ಮಹಾ ಎಕ್ಸ್‌ಪ್ರೆಸ್ ನ್ಯೂಸ್ ರಿಪೋರ್ಟರ್ ಆಗಿರುವ ಪ್ರತೀಕ್ ಎಂಬಾತ ಕಿಸ್ ಕೊಟ್ಟ ಯುವಕನನ್ನು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂಬುದಾಗಿ ವಿದ್ಯುನ್ಮಾನ ಸಾಧನದ ಮೂಲಕ ಪ್ರಚೋದನೆಯಿಂದ ಕೂಡಿದ ಸುಳ್ಳು ಮಾಹಿತಿಯನ್ನು ಪ್ರಕಟಿಸಿ ಧಾರ್ಮಿಕ ಜಾತಿಯ ಅಥವಾ ಸಮುದಾಯಿಕ ಅಥವಾ ಇತರ ಕಾರಣಕ್ಕಾಗಿ ದ್ವೇಷ ಭಾವನೆ ಜಾತಿ ಅಥವಾ ಸಮುದಾಯಗಳ ನಡುವೆ ಮೈ ಮನಸ್ಸು ಉಂಟಾಗುವ ರೀತಿಯಲ್ಲಿ ಈ ದಿನ 18.12 ಗಂಟೆಗೆ ಒಂದು ಬದಿಯಲ್ಲಿ ಪ್ರವೀಣ್ ನೆಟ್ಟಾರು ಹಾಗೂ ಮತ್ತೊಂದು ಬದಿಯಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಾಫಿ ಬೆಳ್ಳಾರೆಗೆ ಯುವಕನೊಬ್ಬ ಕಿಸ್ ಕೊಡುವ ಪೋಸ್ಟ್ ಮಾಡಿರುವುದರಿಂದ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ದೂರಿನಲ್ಲಿ ಎಎಸ್‌ಐ ಕುಶಾಲಪ್ಪ ನಾಯ್ಕ ಅವರು ದೂರಿನಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿದ ಠಾಣಾಧಿಕಾರಿಯವರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 19/2025ರಂತೆ ಬಿಎನ್‌ಎಸ್ 353(2)-2023ರಂತೆ ಪ್ರತೀಕ್ ವಿರುದ್ಧ ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಪ್ರತೀಕ್ ವಿರುದ್ಧ ಇರುವ ಇತರ ದೂರುಗಳ ಮತ್ತು ಕೇಸುಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಮಹಾ ಎಕ್ಸ್ ಪ್ರೆಸ್ ವೆಬ್ ಮಾಧ್ಯಮದ ಮಾಲಕರು
ಸವಣಾಲು ಗ್ರಾಮದ ಗಣೇಶ್ ಶೆಟ್ಟಿ ಎಂಬವರಾಗಿದ್ದು ಇವರು ಪ್ರಸ್ತುತ ಮುಂಬೈಯಲ್ಲಿ ನೆಲೆಸಿದ್ದಾರೆ. ಅವರು ಹವ್ಯಾಸವಾಗಿ ವೆಬ್‌ಸೈಟ್ ನಡೆಸುತ್ತಿದ್ದು ಪ್ರತೀಕ್ ಕೋಟ್ಯಾನ್ ವರದಿಗಳಿಗೆ, ಕಿತಾಪತಿಗಳಿಗೆ ಪೂರ್ಣ ಜವಾಬ್ದಾರಿ ಎಂದು ಮಾಹಿತಿ ಲಭ್ಯವಾಗಿದೆ.